ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಡಿ.9 ರಿಂದ 17ರವರೆಗೆ ಸಾರ್ವಜನಿಕರಿಂದ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಅಹವಾಲು ದೂರು ಸ್ವೀಕರಿಸಲಿದ್ದಾರೆ.
ಡಿ.9 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ರಾಮದುರ್ಗ ಪ್ರವಾಸಿ ಮಂದಿರದಲ್ಲಿ ಜೆ.ರಘು, ಡಿ.ಎಸ್.ಪಿ. ಬೆಳಗಾವಿ, ಡಿ.12 ರಂದು ಚಿಕ್ಕೋಡಿಯಲ್ಲಿ ಪಿ.ಆರ್.ಧಬಾಲಿ, ಪಿಐ, ಬೆಳಗಾವಿ,
ಬೈಲಹೊಂಗಲದಲ್ಲಿ ಅನ್ನಪೂರ್ಣಾ ಹುಲಗೂರ್ ಪಿ.ಐ, ಬೆಳಗಾವಿ, ಅಥಣಿಯಲ್ಲಿ ರವಿಕುಮಾರ ಆರ್.ಧರ್ಮಟ್ಟಿ, ಪಿಐ, ಬೆಳಗಾವಿ,
ಡಿ.13 ರಂದು ಸವದತ್ತಿಯಲ್ಲಿ ಅನ್ನಪೂರ್ಣಾ ಹುಲಗೂರ್ ಪಿ.ಐ, ಬೆಳಗಾವಿ, ನಿಪ್ಪಾಣಿಯಲ್ಲಿ ಪಿ.ಆರ್.ಧಬಾಲಿ, ಪಿಐ, ಬೆಳಗಾವಿ, ಡಿ.14 ರಂದು ಹುಕ್ಕೇರಿಯಲ್ಲಿ ರವಿಕುಮಾರ ಆರ್.ಧರ್ಮಟ್ಟಿ, ಪಿಐ, ಬೆಳಗಾವಿ,
ಡಿ.15 ರಂದು ಖಾನಾಪುರದಲ್ಲಿ ಬಿ.ಎಸ್.ಪಾಟೀಲ, ಡಿ.ಎಸ್.ಪಿ, ಬೆಳಗಾವಿ.ಡಿ.17 ರಂದು ಗೋಕಾಕ ಪ್ರವಾಸಿ ಮಂದಿರಗಳಲ್ಲಿ ಜೆ.ರಘು, ಡಿ.ಎಸ್.ಪಿ. ಬೆಳಗಾವಿ, ಹಾಗೂ ಡಿ.16 ರಂದು ಬೆಳಗಾವಿ ಲೋಕಾಯುಕ್ತ ಕಚೇರಿಯಲ್ಲಿ ಬಿ.ಎಸ್.ಪಾಟೀಲ, ಡಿ.ಎಸ್.ಪಿ, ಬೆಳಗಾವಿ ಅಹವಾಲು ಆಲಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.0831-2950756 ಸಂಪರ್ಕಿಸಬಹುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖರ್ಗೆಗೆ ಅಭಿನಂದನೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ