Karnataka NewsUncategorized

ಉಪಗ್ರಹ ಕುರಿತು ಅಧ್ಯಯನ, ಜ್ಞಾನ ಅವಶ್ಯಕ – ದೀಪಕ ಧಡೂತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವದಲ್ಲಿನ ಮುಂದುವರೆದೆ ರಾಷ್ಟ್ರಗಳಲ್ಲಿ ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತ ದೇಶವೂ ಸಹ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಮಾನ ಹೊಂದಿದೆ. ಮುಂಬರುವ ಸ್ಫರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಪಗ್ರಹದ ಕುರಿತು ಅಧ್ಯಯನ ಮಾಡುವುದು ಮತ್ತು ಅದರ ಜ್ಞಾನ ಹೊಂದುವುದು ಅತೀ ಅವಶ್ಯಕವಾಗಿದೆ ಎಂದು ಸರ್ವೋ ಕಂಟ್ರೋಲ್ಸ್ ಎರೋಸ್ಪೇಸ್ ಇಂಡಿಯಾ  ಪ್ರೈ.ಲಿ. ನ ವ್ಯವಸ್ಥಾಪಕ ನಿರ್ದೇಶಕ ದೀಪಕ ಧಡೂತಿ ಹೇಳಿದರು.

ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ವರ್ಷದ ಆಚರಣೆ ಅಂಗವಾಗಿ ಭರತೇಶ ಶಿಕ್ಷಣ ಸಂಸ್ಥೆಯ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯಕ್ಕೆ 25 ಲಕ್ಷ ರೂ. ಮೌಲ್ಯದ ಚಿಕ್ಕ ಉಪಗ್ರಹವನ್ನು (ನ್ಯಾನೋಸೆಟ್‌ಲೈಟ್) ಕೊಡುಗೆಯಾಗಿ ನೀಡಿದ ದೀಪಕ ಧಡೂತಿ ಅವರು ಉಪಗ್ರಹ ಪ್ರಯೋಗಾಲವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಸೆಟ್ ಲೈಟ್ ಪ್ರಯೋಗಾಲಯವನ್ನು ಹೊಂದಿದ ರಾಜ್ಯದ ಪ್ರಥಮ ಪಾಲಿಟೆಕ್ನಿಕ್ ಮಹಾವಿದ್ಯಾಲವಾಗಿದ್ದು ಪಾಲಿಟೆಕ್ನಿಕ್ , ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್,  ಎಲೆಕ್ಟ್ರಿಕಲ್ ಮತ್ತು  ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಯನ್ಸ್, ಮೆಕ್ಯಾನಿಕಲ್ ಮತ್ತು ಮೆಕ್ಯಾಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಉಪಗ್ರಹದ ತಯಾರಿಕೆ, ನಿಯಂತ್ರಣ ಮುಂತಾದ ವಿಷಯಗಳ ಕುರಿತು ಅಧ್ಯಯನ ಮಾಡಲು ಉಪಯುಕ್ತವಾಗಿದೆ ಎಂದರು.

ಇದಲ್ಲದೆ ಉಪಗ್ರಹ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಚಿಕ್ಕ ಉಪಗ್ರಹದ ಮೂಲಕ ಉಪಗ್ರಹ ತಯಾರಿಕೆ, ನಿಯಂತ್ರಣ ಸೇರಿದಂತೆ ಇನ್ನಿತರ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಹೊಂದಲು ಅನಕೂಲವಾಗುತ್ತದೆ. ಅಲ್ಲದೆ ತರಬೇತಿಗಾಗಿ ಬೇಕಾದ ನುರಿತ ಅನುಭವಿ ತಂತ್ರಜ್ಞಾನಿ ಮತ್ತು ಪರಿಣಿತರನ್ನು ತಮ್ಮ ಸಂಸ್ಥೆಯ ವತಿಯಿಂದ ನೀಡುವುದಾಗಿ ಅವರು ತಿಳಿಸಿದರು.

Home add -Advt

ಉದ್ಘಾಟನೆಯ ನಂತರ ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕ ಮಾಲಿಕೆಯ ಮೊದಲನೆ ಉಪನ್ಯಾಸವನ್ನು ಉದ್ಯಮಶೀಲತೆ ಮತ್ತು ಪ್ರಾರಂಭ ವಿಷಯ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣವರ ಅವರು ಮಾತನಾಡಿ ,ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಉಪಗ್ರಹವನ್ನು ದಾನವಾಗಿ ನೀಡಿ ಪ್ರಯೋಗಾಲಯವನ್ನು ಸ್ಥಾಪಿಸಲು ಕಾರಣಿಭೂತರಾದ ದೀಪಕ ಧಡೂತಿ ಹಾಗೂ ಅವರ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಪಾಲ ಖೇಮಲಾಪುರೆ, ಪಾಲಿಟೆಕ್ನಿಕ್ ತಾಂತ್ರಿಕ ಸಲಹಾ ಮಂಡಳಿಯ ಚೇರ್ಮನ್  ಅಶೋಕ ದಾನವಾಡೆ , ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ತಾಂತ್ರಿಕ ಸಲಹಾ ಮಂಡಳಿಯ ಸದಸ್ಯರು, ಮತ್ತು ಪ್ರಾಚಾರ್ಯ ಬಿ.ಎಂ.ಬಿ.ಪಾಟೀಲ, ಟೆಕ್ನಿಕಲ್ ಡೈರೆಕ್ಟರ್  ಎಸ್. ಎನ್.ತುಳಸಿಗೇರಿ, ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಸೋಮಶೇಖರ ಅಂಬವ್ವಗೋಳ ಮತ್ತು ಪಾಲಿಟೆಕ್ನಿಕ್‌ನ ಎಲ್ಲ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜು ಶ್ರೀವಾಸ್ತವ ಸಾವನ್ನು ಕೆಟ್ಟದ್ದಾಗಿ ಕಮೆಂಟ್ ಮಾಡಿದ ಕಮೆಡಿಯನ್ ಗೆ ನೆಟ್ಟಿಗರಿಂದ ಛೀಮಾರಿ

Related Articles

Back to top button