
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಂಪು ಪಾನೀಯ ಬಾಟಲಿಗಳು ತುಂಬಿದ್ದ ಟಾಟಾ ಲಾರಿ ವಾಹನ ಪಲ್ಟಿಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ತಂಪು ಪಾನೀಯ ಹಾನಿಯಾಗಿರುವ ಘಟನೆ ಬೈಲಹೊಂಗಲ ಸಮೀಪದ ಮೇಕಲಮರ್ಡಿ ಕ್ರಾಸ್ ಬಳಿ ಬೆಳಗಾವಿ ಬಾಗಲಕೋಟ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಗೋವಾದಿಂದ ಹೈದ್ರಾಬಾದ್ ಗೆ ತಂಪು ಪಾನೀಯ ಸಾಗಿಸುತ್ತಿದ್ದ ಈ ವಾಹನ ಅಪಘಾತಗೊಂಡಿದ್ದು, ಮುಂದೆ ಸಾಗುತ್ತಿದ ಖಾಸಗಿ ಬಸ್ಸಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂದೆ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಪಲ್ಟಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಖಾಸಗಿ ಬಸ್ ರಸ್ತೆಗೆ ಅಡ್ಡಲಾಗಿ ನಿಂತಿದ್ದರಿಂದ ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಯಿತು.ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ