Karnataka News

*ಮತ್ತೊಂದು ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ದುರ್ಮರಣ; ರಸ್ತೆ ತಡೆದು ಸ್ಥಳೀಯರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಧಾರವಾಡದ ಸಂಪಿಗೆ ನಗರದ ಬಳಿ ಲಾರಿ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಆಟೋ ಚಾಲಕ ರಮೇಶ್ ಹಂಚಿನಮನಿ (55), ಮರೆವ್ವ ಹಂಚಿನಮನಿ ಹಾಗೂ ಪ್ರಣವ್ (6) ಮೃತ ದುರ್ದೈವಿಗಳು. ಅಪಘಾತದಲ್ಲಿ ರೇಣುಕಾ (25) ಹಾಗೂ ಪೃಥ್ವಿ (5) ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಹಂಪು ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಸಾಧನಕೇರಿಯಿಂದ ಸಂಪಿಗೆನಗರ ಕೆಲಗೇರಿ ಆಂಜನೇಯನಗರ ವರೆಗೂ ಒಂದು ರೋಡ್ ಹಂಪ್ ಇರುವದಿಲ್ಲ ಅದರಿಂದ ಎಲ್ಲಾ ಸಾರ್ವಜನಿಕರೂ ಸೇರಿ ರಸ್ತೆ ಬಂದ್ ಮಾಡಿ ಆ ಕುಟುಂಬಕ್ಕೆ ನ್ಯಾಯ ಕೊಡಬೇಕು ಕೂಡಲೇ ರಸ್ತೆ ಹಂಪ್ ಹಾಕಬೇಕು ಎಂದು ಹೋರಾಟ ನಡೆಸಿದರು. ಪ್ರತಿಭಟನೆಯಲ್ಲಿ ಕೆಲಗೇರಿ ಮಾದಿಗ ಸಮಾಜದ ಯುವ ಮುಖಂಡ ಹಾಗೂ ಧಾರವಾಡ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ಮುಗಳಿ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button