Latest

ಭೀಕರ ರಸ್ತೆ ಅಪಘಾತ: ಮದುಮಗಳು ಸೇರಿ 6 ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಸಾವನ್ನಪ್ಪಿರುವ ಘಟನೆ ಗುಂಡೂರು ಮಂಡಲಂ ವ್ಯಾಪ್ತಿಯ ಮರ್ರಿಮಿಟ್ಟ ಗ್ರಾಮದಲ್ಲಿ ನಡೆದಿದೆ.

ಮದುವೆ ಬಟ್ಟೆ ಖರೀದಿಸಲೆಂದು ಆಟೋದಲ್ಲಿ ಮದುಮಗಳು ಹಾಗೂ ಕುಟುಂಬದವರು ತೆರಳುತ್ತಿದ್ದರು. ಈ ವೇಳೆ ಮರ್ರಿಮಿಟ್ಟ ಪ್ರದೇಶದಲ್ಲಿ ಆಟೋ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಮದುಮಗಳು ಸೇರಿದಂತೆ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮೃತರು ಎರ್ರಾಕುಂಟಾ ತಾಂಡಾಗೆ ಸೇರಿದವರು ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button