Belagavi NewsBelgaum NewsKannada NewsKarnataka NewsLatest

*ಹವ್ಯಕ ಕ್ಷೇಮಾಭಿವೃದ್ಧಿ ಸಂಘದಿಂದ ಯಜ್ಞೋಪವೀತ ಧಾರಣ ಕಾರ್ಯಕ್ರಮ*

ಬೆಳಗಾವಿ: ಇಲ್ಲಿನ ಹವ್ಯಕ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಸಂಘದಿಂದ ಯಜ್ಞೋಪವೀತ ಧಾರಣ ಕಾರ್ಯಕ್ರಮ ನಡೆಯಿತು.

ಕೃಷ್ಣ ದೇವರಾಯ ವೃತ್ತದ ಗೀತ ಗಂಗಾ ಕಟ್ಟಡದಲ್ಲಿ ನಡೆದ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ವಿ.ಎನ್.ಹೆಗಡೆ ಉದ್ಘಾಟಿಸಿದರು.

Related Articles

 ಹವ್ಯಕ ಬ್ರಾಹ್ಮಣ ಸಮಾಜದ ಪುರುಷರು ಜನಿವಾರ ಧರಿಸಿದರು. ಇದೇ ವೇಳೆ ಮಹಿಳೆಯರಿಗೆ ರಂಗವಲ್ಲಿ ಸ್ಫರ್ಧೆ ಸಹ ನಡೆಯಿತು. 

ನಂತರ ಸಂಘದ ವಾರ್ಷಿಕ ಸರ್ವಸಾಮಾನ್ಯ ಸಭೆ ನಡೆಸಲಾಯಿತು.  ಹೊಸ ಸದಸ್ಯರನ್ನು ಪರಿಚಯಿಸಲಾಯಿತು. ಎ.ಕೆ.ಭಟ್ ಭಾರತ ಮಾತೆಗೆ ಪೂಜೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನಾ ಶ್ಲೋಕ ಪಠಿಸಲಾಯಿತು. ಸಂಘದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

Home add -Advt

ಉಪಾಧ್ಯಕ್ಷ ಗಣೇಶ ಹೆಗಡೆ, ಕಾರ್ಯದರ್ಶಿ ಸಿ.ಜಿ. ಶಾಸ್ತ್ರಿ, ಖಜಾಂಚಿ ಸೀತಾರಾಮ ಭಾಗ್ವತ, ಕಾರ್ಯಕಾರಿಣಿ ಸದಸ್ಯರಾದ ಎಂ.ಕೆ.ಹೆಗಡೆ, ವಿದ್ಯಾ ಹೆಗಡೆ, ವಸುಮತಿ ಹೆಗಡೆ ಮೊದಲಾದವರು ಇದ್ದರು.

ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಸಂಘದ ಅಧ್ಯಕ್ಷೆ ಪೂರ್ಣಿಮಾ ಹೆಗಡೆ ಪ್ರಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. 

Related Articles

Back to top button