Latest

*ಮತಾಂತರಕ್ಕೆ ಒಪ್ಪದ ಪತ್ನಿಗೆ ಕಿರುಕುಳ, ಬೆದರಿಕೆ: ಪತಿ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಮತಾಂತರಕ್ಕೆ ಒಪ್ಪದ ಪತ್ನಿಗೆ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಮುಜಾಹಿದ್ ಖಾನ್ ವಿರುದ್ಧ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯೇ ಪತಿಯ ವಿರುದ್ಧ ದೂರು ನೀಡಿದ್ದಾರೆ. ಲವ್ ಜಿಹಾದ್ ಪ್ರಕರಣ ತಡೆಯುವ ನಿಟ್ಟಿನಲ್ಲಿ ಶ್ರೀರಾಮಸೇನೆ ಆರಂಭಿಸಿದ್ದ ಸಹಾಯವಾಣಿಗೆ ಕರೆ ಮಾಡಿದ್ದ ಮಹಿಳೆ ಪತಿಯ ವಿರುದ್ಧ ದೂರು ನೀಡಿದ್ದರು. ಮತಾಂತರಕ್ಕೆ ಯತ್ನಿಸುತ್ತಿರುವುದಾಗಿ ಕಿರುಕುಳ ನೀಡಿ ಬೆದರಿಕೆ ಹಾಕುತ್ತಿರುವುದಾಗಿ ಸಂಕಷ್ಟ ತೋಡಿಕೊಂಡಿದ್ದರು.

ಕಲಘಟಗಿ ಮೂಲದ ಮಹಿಳೆ ಮೊದಲು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಂಪನಿಯ ಸಹೋದ್ಯೋಗಿಯೇ ಆಗಿದ್ದ ಮುಜಾಹಿದ್ ನ ಪರಿಚಯವಾಗಿ ಸ್ನೇಹ ಪ್ರೇಮವಾಗಿ ತಿರುಗಿದ್ದು, ಇಬ್ಬರು ವಿವಾಹವಾಗಿದ್ದರು. 2017ರಲ್ಲಿ ಮುಜಾಹಿದ್ ಹಾಗೂ ಕಲಘಟಗಿ ಮೂಲದ ಯುವತಿ ವಿವಾಹವಾಗಿದ್ದರು. ಅದಾಗಲೇ ಮುಜಾಹಿದ್ ಗೆ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಷಯವೇ ಯುವತಿಗೆ ತಿಳಿದಿರಲಿಲ್ಲ.

ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ಬಳಿಕ ಮುಜಾಹಿದ್ ಗೆ ಮೊದಲ ಮದುವೆ, ಮಕ್ಕಳ ಬಗ್ಗೆ ಗೊತ್ತಾಗಿದೆ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಇದೇ ವೇಳೆ ಮುಜಾಹಿದ್ ಎರಡನೇ ಪತ್ನಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸ ತೊಡಗಿದ್ದ. ಇಬ್ಬರ ನಡುವೆ ಇದೇ ವಿಚಾರವಾಗಿ ಜಗಳ, ಗಲಾಟೆಯಾಗಿದ್ದು, ಬೇಸತ್ತ ಪತ್ನಿ ಕಲಘಟಗಿಗೆ ವಾಪಾಸ್ ಆಗಿದ್ದಾರೆ. ಕೆಲ ದಿನಗಳಿಂದ ಆರಂಭವಾಗಿರುವ ಶ್ರೀರಾಮಸೇನೆಯ ಸಹಾಯವಾಣಿಗೆ ಕರೆ ಮಾಡಿದ್ದು, ಸಂಕಷ್ಟ ತೋಡಿಕೊಂಡಿದ್ದಾರೆ. ಶ್ರೀರಾಮಸೇನೆ ನೆರವಿವ ಮೇರೆಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮುಜಾಹಿದ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button