
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಮಜನ್ಮಭೂಮಿ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ರಸೀದಿ ಪುಸ್ತಕ ಪೂಜಾ ಕಾರ್ಯಕ್ರಮ ಶಾಹುನಗರದ ಮಹದೇವ ಮಂದಿರದಲ್ಲಿ ಸೋಮವಾರ ನಡೆಯಿತು.
ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಆಶ್ರಯದಲ್ಲಿ ಮೊತ್ತ ಸಮರ್ಪಣೆ ಮಾಡುವ ವ್ಯಕ್ತಿಗಳನ್ನು ಸಂಪರ್ಕಿಸುವ ಸಲುವಾಗಿ ನಡೆದ ಈ ಪೂಜಾ ಕಾರ್ಯಕ್ರಮದ ಸಾನಿದ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ವಹಿಸಿದ್ದರು. ಹಿರಿಯ ಸ್ವಯಂಸೇವಕರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಸಕ ಅನಿಲ ಬೆನಕೆ, ಪರಮೇಶ್ವರ ಹೆಗಡೆ, ಅಶೋಕ ಶಿಂತ್ರೆ, ಕೃಷ್ಣ ಭಟ್, ಶ್ರೀಕಾಂತ ಕದಂ, ವಿಜಯ ಜಾಧವ, ವಾಣಿ ರಮೇಶ್, ಸತೀಶ್ ಮಾಳೋದೆ,ಅನೂಪ್ ಕಾಟೆ, ಬಸವರಾಜ ಹಳಿಂಗಳಿ, ಶಿವಬಸಪ್ಪ ಬಾವಿ, ಸಚಿನ್ ಸಬನೀಸ್ ಮೊದಲಾದವರು ಭಾಗವಹಿಸಿದ್ದರು.


