Karnataka News

*ಪ್ರೀತಿ-ಪ್ರೇಮವೆಂದು ಸುತ್ತಾಡಿ ಮಹಿಳೆಗೆ ಮೋಸ: 3 ಬಾರಿ ಅಬಾರ್ಷನ್ ಮಾಡಿಸಿ ಕೈಕೊಟ್ಟ ಯುವಕ*

ಪ್ರಗತಿವಾಹಿನಿ ಸುದ್ದಿ: ಹಳೇ ಪ್ರೇಯಸಿಗೆ ವಿವಾಹವಾಗಿದ್ದರೂ ಆಕೆಯ ಸಂಸರಾ ಹಾಳು ಮಾಡಿ, ಪ್ರೀತಿ-ಪ್ರೇಮದ ಹೆಸರಲ್ಲಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಮೂರು ಬಾರಿ ಅಬಾರ್ಷನ್ ಮಾಡಿಸಿದ್ದ ಯುವಕ ರಿಜಿಸ್ಟರ್ ಮ್ಯಾರೇಜ್ ಆಗುವಾಗ ನಾಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಕೊಳ್ಳೆಗಾಲ ಮೂಲದ ಕ್ಲಿಂಟನ್ ಮೋಸ ಮಾಡಿ ಕೈಕೊಟ್ಟಿರುವ ಯುವಕ. ಆರಂಭದಲ್ಲಿ ನರ್ಸಿಂಗ್ ಓದುತ್ತಿದ್ದ ಯುವತಿಗೆ ಪರಿಚಯನಾದ ಕ್ಲಿಂಟನ್ ಬಳಿಕ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿ ಕ್ಲಿಂಟನ್ ಪೋಷಕರಿಗೆ ತಿಳಿಸಿದ್ದಾರೆ. ಪ್ರೀತಿ-ಪ್ರೇಮ ಎಂದು ಅಲೆದಾಡುವುದನ್ನು ಬಿಟ್ಟು ಮದುವೆಯಾಗುವಂತೆ ಕೇಳಿದ್ದಾರೆ. ಯುವತಿ ಮನೆಯವರ ಪ್ರಸ್ತಾಪವನ್ನು ಕ್ಲಿಂಟನ್ ಮನೆಯವರು ಒಪ್ಪಿಲ್ಲ. 2022ರಲ್ಲಿ ಯುವತಿಯ ಮನೆಯವರು ಯುವತಿಗೆ ತಮಿಳುನಾಡು ಮೂಲಸ ಸ್ಟೀಫನ್ ರಾಜ್ ಎಂಬಾತನ ಜೊತೆ ಮದುವೆ ಮಾಡಿಕೊಟ್ಟಿದ್ದರು.

ಸ್ಟೀಫನ್ ರಾಜ್ ಜೊತೆ ಚನ್ನಾಗಿಯೇ ಇದ್ದ ಯುವತಿ ಸಂಸಾರದಲ್ಲಿ ಮಾಜಿ ಲವ್ವರ್ ಎಂಟ್ರಿಕೊಟ್ಟಿದ್ದಾನೆ. ಸಾಲದ್ದಕ್ಕೆ ಸ್ಟೀಫನ್ ರಾಜ್ ಗೆ ನಿನ್ನ ಪತ್ನಿ ತನ್ನ ಮಾಜಿ ಪ್ರಿಯತಮೆ ಎಂದು ಹೇಳಿದ್ದಲ್ಲದೇ ಹಳೆ ಫೋಟೊಗಳನ್ನು ಆತನಿಗೆ ಕಳುಹಿಸಿ ಸಂಸಾರವನ್ನು ಹಾಳುಗೆಡವಿದ್ದಾನೆ. ಅಲ್ಲದೇ ಮಾಜಿ ಪ್ರಿಯತಮೆಗೆ ಸ್ಟೀಫನ್ ಗೆ ವಿಚ್ಛೇದನ ನೀಡಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸತೊಡಗಿದ್ದಾನೆ.

ಕ್ಲಿಂಟನ್ ಹುಚ್ಚಾಟ ವಿಪರೀತಕ್ಕೆ ಹೋಗುತ್ತಿದ್ದಂತೆ ನೊಂದ ಯುವತಿಯ ಪತಿ ಪತ್ನಿಯಿಂದ ದೂರಾಗಿದ್ದಾನೆ. ಸ್ಟೀಫನ್ ನಿಂದ ವಿಚ್ಛೇದನ ಪಡೆದು ಬಂದ ಯುವತಿಯೊಂದಿಗೆ ಕ್ಲಿಂಟನ್ ಮತ್ತೆ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಹತ್ತು ತಿಂಗಳ ಕಾಲ ಸುತ್ತಾಡಿ ಜೊತೆಯಲ್ಲಿಯೇ ವಾಸವಾಗಿದ್ದ. ಈ ನಡುವೆ ಮೂರು ಬಾರಿ ಯುವತಿಗೆ ಅಬಾರ್ಷನ್ ಕೂಡ ಮಾಡಿಸಿದ್ದಾನೆ. ಯುವತಿ ಮದಿವೆಯಾಗುವಂತೆ ಒತ್ತಾಯಿಸಿ ರಿಜಿಸ್ಟರ್ ವಿವಾಹಕ್ಕೆ ಡೇಟ್ ಫಿಕ್ಸ್ ಮಾಡಿಸಿದ್ದಾಳೆ.

Home add -Advt

ಫೆ.12ರಂದು ಕೊಳ್ಳೇಗಾಲ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಬೇಕಿತ್ತು. ಮದುವೆ ನೋಂದಣಿ ಮಾಡಿಸಿಕೊಳ್ಳಲು ಬರಬೇಕಿದ್ದ ಪ್ರಿಯತಮ ಕ್ಲಿಂಟಮ್ ನಾಪತ್ತೆಯಾಗಿದ್ದಾನೆ. ಕರೆ ಮಾಡಿದರೆ ಫೋನ್ ಕೂಡ ಸ್ವಿಚ್ ಆಫ್. ಯುವಕನ ಹುಚ್ಚಾಟಕ್ಕೆ ಬೇಸತ್ತು ಹೋದ ಸಂತ್ರಸ್ತೆ ರಾಮಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button