Kannada NewsNational

ಬಾವಿಗೆ ಬಿದ್ದ ಬೆಕ್ಕು ರಕ್ಷಣೆಗೆ ಹೋದ ಐವರ ಸಾವು; ಮಹಾರಾಷ್ಟ್ರದಲ್ಲಿ ದುರ್ಘಟನೆ

ಪ್ರಗತಿವಾಹಿನಿ ಸುದ್ದಿ – ಮನುಷ್ಯನಿಗೆ ಸಾವು ಯಾವ ರೂಪದಲ್ಲಿ ಬರುತ್ತೆ ಎಂದು ಹೇಳಲು ಆಗುವುದಿಲ್ಲ. ಅರಾಮಾಗಿ ಇದ್ದ ಒಂದೆ ಕುಟುಂಬದ ಐವರ ಪಾಲಿಗೆ ಯಮವಾಗಿ ಬಂದಿದ್ದು, ಒಂದು ಬೆಕ್ಕು.‌ ಬೆಕ್ಕು ರಕ್ಷಣೆ ಮಾಡಲು ಹೋದ ಒಂದು ಕುಟುಂಬದ ಐವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ತೆರೆದ ಬಾವಿಯಲ್ಲಿ ಬಿದ್ದ ಬೆಕ್ಕು ರಕ್ಷಿಸಲು ಹೋದ ಒಂದೇ ಕುಟುಂಬದ ಐದು ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ನಾಸೀಕ್ ಜಿಲ್ಲೆಯ ನೇವಾಸಾ ತಾಲೂಕಿನ ವಕಾಡಿ ಗ್ರಾಮದಲ್ಲಿ ನಡೆದಿದೆ.

ಬೆಕ್ಕನ್ನು ರಕ್ಷಿಸಲು ಮೊದಲು ಒಬ್ಬರು ಇಳಿದಿದ್ದರು. ಅವರನ್ನು ರಕ್ಷಿಸಲು ಮತ್ತೊಬ್ಬರು ಬಾವಿಗೆ ಹಾರಿದ್ದಾರೆ. ಹೀಗೆ ಆರು ಜನರು ಬಾವಿಗೆ ಹಾರಿದ್ದರು. ಇವರಲ್ಲಿ ಒಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಐವರು ಸಾವನ್ನಪ್ಪಿದ್ದಾರೆ.

ಬುಧವಾರ ಮಧ್ಯರಾತ್ರಿ 12.30ರವರೆಗೆ ಶವಗಳನ್ನು ಹೊರ ತೆಗೆಯುವ ಕಾರ್ಯ ಮುಗಿದಿದೆ ಎಂದು ನೇವಾಸಾ ಪೊಲೀಸರು ಮಾಹಿತಿ ನೀಡಿದ್ದಾರೆ.

Home add -Advt

Related Articles

Back to top button