ಸಂತೋಷಕುಮಾರ ಕಾಮತ, ಮಾಂಜರಿ -ಕರ್ನಾಟಕದಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಯೋಗ್ಯಬೆಲೆ ನೀಡದೆ ಇರುವುದರಿಂದ ರಾಜ್ಯದ ಗಡಿ ಭಾಗದ ಕಬ್ಬನ್ನು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ಕಳುಹಿಸುತ್ತಾರೆ.
ಪ್ರಸಕ್ತ ಸಾಲಿನಲ್ಲಿ ಭೀಕರ ಬರಗಾಲ, ಸತತ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಶೇ ೫೦ ಕ್ಕೂ ಹೆಚ್ಚು ಕಬ್ಬು ನಾಶವಾಗಿದ್ದು, ಇದರಿಂದಾಗಿ ಕಾರ್ಖಾನೆಗಳಿಗೆ ಕಬ್ಬು ಕಡಿಮೆ ಬಿಳುವುದರಿಂದ ಜನ ಪ್ರತಿನಿಧಿಗಳು ಅಂತರ್ ರಾಜ್ಯ ಕಬ್ಬು ಸಾಗಣೆ ನಿರ್ಬಂಧಕ್ಕೆ ಮುಂದಾಗಿದ್ದರಿಂದ ರೈತರು ಅಕ್ರೋಶ ವ್ಯಕ್ತ ಪಡಿಸುತ್ತಿದ್ದು, ನಿರ್ಬಂಧ ಹಾಕುವ ಬದಲು ನೀವು ಸಹ ಮಾಹಾರಾಷ್ಟ್ರದ ಕಾರ್ಖಾನೆಗಳು ನಿಡುವಂತೆ ಬೆಲೆ ನಮಗೂ ನೀಡಲು ಮುಂದಾಗ ಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಕರ್ನಾಟಕದ ಜನಪ್ರತಿನಿಧಿಗಳು ಮತ್ತು ಸಕ್ಕರೆ ಕಾರ್ಖಾನೆಯ ಮುಖಂಡರು ಮಹಾರಾಷ್ಟ್ರದ ವಿಧಾನ ಸಭೆ ಚುನಾವಣೆ ಪ್ರಚಾರ ಮಾಡಲು ನಡೆಯುತ್ತದೆ. ಆದರೆ ಇದೆ ಮುಖಂಡರು ಮಹಾರಾಷ್ಟ್ರಕ್ಕೆ ಕಬ್ಬು ಕಳುಹಿಸಲು ನಿರ್ಬಂಧ ಹಾಕಲು ಮುಂದಾಗಿದ್ದು, ಇದ್ಯಾವ ನ್ಯಾಯ ಎಂಬ ಪ್ರಶ್ನೆ ರೈತರದ್ದಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಬಹುತೇಕ ಕಾರ್ಖಾನೆಗಳು ಬಹುರಾಜ್ಯ ಕಾಯಿದೆಯಡಿ ನೊಂದಾಗಿರುವುದರಿಂದ ಕಾರಖಾನೆಯ ಸದಸ್ಯತ್ವ ಹೊಂದಿದ್ದ ರೈತರಿಗೆ ತೊಂದರೆ ಯಾಗುವುದಿಲ್ಲ. ಆದರೆ ಸದಸ್ಯತ್ವವನ್ನು ಹೊಂದದೆ ಇರುವವರಿಗೆ ಮಾತ್ರ ತೊಂದರೆಯಾಗಲಿದೆ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಕರ್ನಾಟಕ ರಾಜ್ಯದ ಕಾರ್ಖಾನೆಗಳು ಪ್ರತಿಟನ್ನಿಗೆ ೪೦೦ ರಿಂದ ೫೦೦ ರೂ ಕಡಿಮೆ ಕೊಡುತ್ತಾರೆ, ಇದರಿಂದಾಗಿ ರಾಜ್ಯದ ಶೇ ೫೦ ಕ್ಕೂ ಹೆಚ್ಚು ಕಬ್ಬು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಹೋಗುತ್ತದೆ.
ಚಿಕ್ಕೋಡಿ ತಾಲೂಕಿನಲ್ಲಿ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ಪಂಚಗಂಗಾ, ವೇದಗಂಗಾ ಮತ್ತು ಚಿಕೋತ್ರಾ ನದಿಗಳ ಕೃಪಾಕಟಾಕ್ಷವಿದ್ದರೂ ತಾಲೂಕಿನಲ್ಲಿ ೧,೨೬,೯೪೯ ಹೆಕ್ಟೆರ್ ಭೂಮಿ ಪೈಕಿ ೫೯,೪೯೧ ಹೆಕ್ಟೆರ್ ಕಬ್ಬು ಬೆಳೆದಿದ್ದರು.
ಇದರಲ್ಲಿ ಪ್ರವಾಹದಿಂದಾಗಿ ೨೮,೭೩೯ ಹೆಕ್ಟೆರ್ ಕಬ್ಬು ಕೊಳೆತು ಹೋಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಈ ವರ್ಷ ತಲೆನೋವು ಉಂಟುಮಾಡಲಿದೆ. ಆದರೂ ಕಬ್ಬು ಉತ್ಪಾದಕರತ್ತ ಸಕ್ಕರೆ ಕಾರ್ಖಾನೆಗಳು ಅನುಕಂಪ ತೋರುತ್ತಿಲ್ಲಾ ಎಂದು ರೈತರು ಆರೋಪಿಸುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನಲ್ಲಿ ಬೆಳೆದ ಕಬ್ಬನ್ನು ಮಹಾರಾಷ್ಟ್ರದ ಗಡಿ ಭಾಗದ ಆರು ಸಕ್ಕರೆ ಕಾರ್ಖಾನೆಗಳಿಗೆ ಮತ್ತು ರಾಜ್ಯದ ಐದು ಸಕ್ಕರೆ ಕಾರ್ಖಾನೆಗೆ ರೈತರು ಕಳುಹಿಸುತ್ತಾರೆ. ಚಿಕ್ಕೋಡಿ, ಜೈನಾಪೂರ, ನಿಪ್ಪಾಣಿ, ಬೇಡಕಿಹಾಳ ಮತ್ತು ಯಂಡ್ರಾವ ಹಾಗೂ ನೆರೆಯ ಮಹಾರಾಷ್ಟ್ರದ ಹುಪರಿ, ಟಾಕಳಿ, ಶಿರೋಳ, ಇಚಲಕರಂಜಿ, ಕಾಗಲ್, ಹಮಿದವಾಡಾ ಸಕ್ಕರೆ ಕಾರಖಾನೆಗಳಿಗೆ ಕಳುಹಿಸುತ್ತಾರೆ.
ಒಂದು ವೇಳೆ ನಿರ್ಭಂದ ಹಾಕಲು ಮುಂದಾದರೆ ರೈತರು ಬೀದಿಗಿಳಿದು ಹೋರಾಟ ಮಾಡುವುದಾಗಿ ಸ್ವಾಭಿಮಾನಿ ರೈತ ಸಂಘಟಣೆಯ ಕೋರ್ ಕಮಿಟಿ ಅಧ್ಯಕ್ಷ ಪಂಕಜ ತಿಪ್ಪನ್ನರ, ಚಿಕ್ಕೋಡಿ ತಾಲೂಕಾ ಸ್ವಾಭಿಮಾನಿ ರೈತ ಸಂಘಟಣೆಯ ಅಧ್ಯಕ್ಷ ಸುಭಾಷ ಚೌಗುಲೆ, ಸದಸ್ಯರಾದ ರಾಜು ರಮೇಶ ಪಾಟೀಲ ಮತ್ತು ರಾಜು ಖಿಚಡೆ ಸೇರಿದಂತೆ ಸದಸ್ಯರು ಹಾಗೂ ರೈತರು ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ