ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಜನಸಾಮನ್ಯರ ಜೇಬಿಗೆ ಬರೆ ಎಳೆದಿದೆ. ಅಡುಗೆ ಅನಿಲ ದರ ಏಕಿಕೆ ಮಾಡಿದೆ.
ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇಂಡೇನ್ ಗ್ಯಾಸ್ ಸಿಲಿಂಡರ್ 11.50 ರೂಪಾಯಿ ಹೆಚ್ಚಿಸಿದೆ. ಕೋಲ್ಕತ್ತಾದಲ್ಲಿ 31.50 ರೂಹೆಚ್ಚಿಸಲಾಗಿದೆ. ಈ ದರ ನಗರದಿಂದ ನಗರಕ್ಕೆ ಬದಲಾವಣೆ ಇರಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ ಬೆಲೆ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಎಲ್ಪಿಜಿ ದರ ಭಾರೀ ಇಳಿಕೆ ಕಂಡಿತ್ತು. 744 ರೂ ಇದ್ದ ಸಿಲಿಂಡರ್ ದರ 581 ರೂಪಾಯಿ ಆಗಿತ್ತು. ಆದರೆ, ಈ ತಿಂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಪಿಜಿ ದರ ಏರಿಕೆ ಕಂಡ ಹಿನ್ನೆಲೆಯಲ್ಲಿ 11 ಸಿಲಿಂಡರ್ಗೆ 11 ರೂಪಾಯಿ ಏರಿಕೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ