Kannada NewsLatestNational
*LPG ಸಿಲಿಂಡರ್ ದರ ಇಳಿಕೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂದಿನಿಂದ ಹಾಲು, ಹೋಟೆಲ್ ತಿಂಡಿ, ತಿನಿಸು ಬೆಲೆ ಏರಿಕೆಯಾಗಿರುವ ಮಧ್ಯೆಯೇ ವಾಣಿಜ್ಯ ಸಿಲಿಂಡರ್ ಬಳಕೆ ದಾರರಿಗೆ ಕೊಂಚ ನೆಮ್ಮದಿ ಸುದ್ದಿ ಹೊರಬಿದ್ದಿದೆ. ಕಮರ್ಷಿಯಲ್ ಸಿಲಿಂಡರ್ ದರ ಇಳಿಕೆಯಾಗಿದೆ.
ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿವೆ. 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
99.75 ರೂಪಾಯಿ ಬೆಲೆ ಕಡಿತ ಮಾಡಲಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದ್ದು ದಿನನಿತ್ಯ ಗರಹಕರು ಬಳಸುವ ಅಡುಗೆ ಅನಿಲ ಸಿಲಿಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.




