Latest

ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ:
ನಿಪ್ಪಾಣಿಯ ದಾನಮ್ಮಾದೇವಿ ವಿದ್ಯಾಪ್ರಸಾರಕ ಮಂಡಳ, ನಿಪ್ಪಾಣಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಧುಳಗನವಾಡಿ ರಂಗ ಕಲಾಶ್ರೀ ಗ್ರಾಮೀಣ ಸೇವಾ ಸಂಘ ಹಾಗೂ ಭಾರತ ಸರಕಾರದ ನೆಹರು ಯುವ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಮಾ.೮ ರಂದು ಬೆಳಗ್ಗೆ ೧೧.೩೦ಕ್ಕೆ ನಿಪ್ಪಾಣಿಯ ದಾನಮ್ಮಾದೇವಿ ವಿದ್ಯಾಪ್ರಸಾರಕ ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಲಾಗಿದೆ.
ಬಾವನ ಸವದತ್ತಿಯ ಓಂಕಾರ ಆಶ್ರಮದ ಬ್ರಹ್ಮರಾಂಬಿಕಾದೇವಿ ಸಾನಿಧ್ಯ ವಹಿಸಲಿದ್ದು, ನಿಪ್ಪಾಣಿ ನಗರ ಸಭೆ ಸದಸ್ಯೆ ಶೀಲಾ ಪಾಟೀಲ ಉದ್ಘಾಟಿಸುವರು. ದಾನಮ್ಮಾದೇವಿ ವಿದ್ಯಾಪ್ರಸಾರಕ ಮಂಡಳದ ನಿರ್ದೇಶಕಿ ಭಾಗ್ಯಶ್ರೀ ಸದಲಗೆ ಅಧ್ಯಕ್ಷತೆ ವಹಿಸುವವರು.
ನಿಪ್ಪಾಣಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ಕಾಂಬಳೆ, ಕಸಾಪ ತಾಲೂಕಾ ಘಟಕ ಅಧ್ಯಕ್ಷೆ ವಿದ್ಯಾವತಿ ಜನವಾಡೆ, ಚಿಕ್ಕೋಡಿ ನಟರಾಜ ನಾಟ್ಯಾಲಯ ಕಲಾ ಸಂಸ್ಥೆಯ ರೇಖಾ ಭಟ್ಟ, ಧುಳಗನವಾಡಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಭರತ ಕಲಾಚಂದ್ರ, ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿ ಡಿ. ದಯಾನಂದ, ಯೋಜನಾಧಿಕಾರಿ ವಿಕಾಸ ಎಂ., ಯುವ ಕೇಂದ್ರದ ಲೇಖಾಪಾಲ ಆರ್.ಆರ್. ಮುತಾಲಿಕದೇಸಾಯಿ ಭಾಗವಹಿಸುವರು.

Related Articles

Back to top button