Kannada NewsLatest

ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ಸ್ನೇಹ ಸದಾ ಇರಲಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲೋಕುರ ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ಎಮ್. ಎಮ್ ಲೋಕುರ ಹೈಸ್ಕೂಲ್ ಲೋಕುರ. ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸುಮಿತ್ರಾ ಎಮ್ ಕವಡೆ ಮೇಡಂ ಅವರನ್ನು ಸತ್ಕರಿಸುವ ಹಾಗೂ ಬಿಳ್ಕೊಡುಗೆಯ ಸಮಾರಂಭದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ  ಶ್ರೀಮಂತ (ತಾತ್ಯಾ) ಪಾಟೀಲ ಅವರು ಭಾಗವಹಿಸಿ, ಅವರನ್ನು ಸತ್ಕರಿಸಿ ಗೌರವಿಸಿದರು.

ಶಾಸಕರು ಮಾತನಾಡಿ ಲೋಕುರ ಗ್ರಾಮದ ಈ ಶಾಲೆಯಲ್ಲಿ ಸುಮಾರು 30 ವರ್ಷಗಳಿಂದ ವಿವಿಧ ಜವಾಬ್ದಾರಿಗಳನ್ನು ಪೂರೈಸಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಅವರು ಲೋಕುರ ಗ್ರಾಮದ ಹಾಗೂ ಈ ಶಾಲೆಯ ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ಸ್ನೇಹ, ಪ್ರೀತಿಗೆ ನಮ್ಮ ವಂದನೆಗಳು. ಹೀಗೆ ನಿಮ್ಮ ಈ ಸ್ನೇಹ ಈ ಶಾಲೆಯ ಮೇಲೆ ಸದಾ ಇರಲಿ ಎಂದರು. ಅವರು ಈ ಶಾಲೆಗೆ ಮಾಡಿರುವ ಕೊಡುಗೆಗಳ ಬಗ್ಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅವರ ಸಾಧನೆ ಬಗ್ಗೆ ಸ್ಮರಿಸಿದರು.

ಇದೇ ಸಮಯದಲ್ಲಿ ಕವಡೆ ಮೇಡಂ ಅವರು ಲೋಕುರ ಗ್ರಾಮದ ವಿದ್ಯಾರ್ಥಿಗಳ ಸಲುವಾಗಿ ಈ ಶಾಲೆಯ ಆವರಣದಲ್ಲಿ ಪೆವಿಂಗ್ ಬ್ಲಾಕ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಪೂರೈಸಬೇಕೆಂದು ಎಂದರು. ಅವರ ಮನವಿಗೆ ಶಾಸಕರು ಸ್ಪಂದಿಸಿ, ಶೀಘ್ರದಲ್ಲಿ ಶಾಲೆಯ ಆವರಣದಲ್ಲಿ ಪೆವಿಂಗ್ ಬ್ಲಾಕ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಪೂರೈಸಲಾಗುವುದು ಎಂದರು.

ಈ ಸಮಯದಲ್ಲಿ ಗ್ರಾಮದ ಸ್ಥಳೀಯ ಮುಖಂಡರು, ಗ್ರಾಮ್ ಪಂಚಾಯತ್ ಸದಸ್ಯರು, ಗ್ರಾಮಸ್ಥರು, ಶಾಲೆಯ ಮುಖ್ಯ ಉಪಾಧ್ಯಾಯರು, ಶಿಕ್ಷಕ ವೃಂದದವರು ಹಾಗೂ ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button