Kannada NewsLatest

ಸರಕಾರಿ ಕಾಲೇಜು ಉದ್ಘಾಟನೆಗೊಂಡ ವಾರದೊಳಗೆ ಬಿರುಕು

ಪ್ರಗತಿವಾಹಿನಿ ಸುದ್ದಿ; ತೆಲಸಂಗ: ಗ್ರಾಮದ ಎಮ್.ವಾಯ್.ಕೆ.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಕೊಠಡಿಗಳು ಉದ್ಘಾಟನೆಗೊಂಡು ವಾರ ಕಳೆದಿಲ್ಲ ಆದರೆ ಆಗಲೇ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿಗೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರವು 1.26 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ನಿರ್ಮಿತ ಕೇಂದ್ರದವರಿಗೆ ನೀಡಿತ್ತು. ಸದ್ಯಕ್ಕೆ 3 ಕೊಠಡಿಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೆಲ್ಛಾವಣಿ ಹಾಕುವಾಗ ಸಮಾಂತರವಿಲ್ಲದೆ ಏರಿಳಿತದ ಕಾಂಕ್ರೆಟ್‍ದಿಂದಾಗಿ ಪೈಪ್‍ಮೂಲಕ ಹೋಗಬೇಕಿದ್ದ ನೀರು ಅಲ್ಲಲ್ಲಿಗೆ ನಿಲ್ಲುತ್ತಿದೆ. ನೀರು ನಿಲ್ಲುವುದರಿಂದ ಮೇಲ್ಛಾವಣಿ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮೇಲೆ ಥಳಕು ಒಳಗೆ ಹುಳುಕು ಅನ್ನುವಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಕೊಟ್ಯಾಂತರ ರೂಪಾಯಿ ಸುರಿದು ನಿರ್ಮಿಸಿದ ಕೊಠಡಿ ಆರಂಬದಲ್ಲಿ ಬಿರುಕು ಕಾಣಿಸಿಕೊಂಡಿರುವುದೇ ಕಳಪೆ ಕಾಮಗಾರಿಗೆ ಸಾಕ್ಷಿ, ಗುಣಮಟ್ಟದ ಇಟ್ಟಿಗೆ, ಸಿಮೆಂಟ್, ಮರಳು ಉಪಯೋಗಿಸಿದ್ದರೆ ಹೀಗಾಗುತ್ತಿರಲಿಲ್ಲ. ಬಳಸಿದ ಸಿಮೆಂಟ್, ಮರಳು, ಇಟ್ಟಿಗೆ, ಕಟ್ಟಡದ ಕಚ್ಚಾವಸ್ತು ಪಡೆದು ಲ್ಯಾಬ್‍ಟೆಸ್ಟ್ ನಡೆಸಿ ಗುಣಮಟ್ಟದ ವರದಿಯನ್ನು ಗ್ರಾಮದ ಗ್ರಾಮ ಪಂಚಾಯತ ಗ್ರಾಮ ಸಭೆಯಲ್ಲಿಡಬೇಕು. ನೂತನ ಕಟ್ಟಡ ಬಿರುಕುಗೊಂಡಿದ್ದಕ್ಕೆ ಕಾರಣರಾದ ನಿರ್ಮಿತ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಲ್ಲದಿದ್ದರೆ ಸಹಿ ಸಂಗ್ರಹ ಮಾಡಿ ದೂರು ನೀಡುವುದು ಮಾತ್ರವಲ್ಲದೆ ಕ್ರಮಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಈ ವಿಷಯವಾಗಿ ಪ್ರಾಂಶುಪಾಲ ಡಾ.ಉದಯಕುಮಾರ ದೊಡ್ಡಮನಿ ಅವರನ್ನು ಪ್ರಶ್ನಿಸಲಾಗಿ, ಉದ್ಘಾಟನೆ ಗೊಂಡ ನಿರ್ಮಿತ ಕೇಂದ್ರದವರು ನಿರ್ಮಿಸಿದ ಕೊಠಡಿಗಳ ಬಿರುಕು ಮತ್ತು ನೀರು ನಿಲ್ಲುತ್ತಿರುವುದರ ಬಗ್ಗೆ ಪತ್ರ ಬರೆದು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಖಾನಾಪುರ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button