ಭಾರತಕ್ಕೆ ಕಳಪೆ ಗುಣಮಟ್ಟದ ರಾಪಿಡ್ ಟೆಸ್ಟಿಂಗ್‌ ಕಿಟ್‌ ರವಾನಿಸಿತಾ ಚೀನಾ?

ಪ್ರಗತಿವಾಹಿನಿ ಸುದ್ದಿ: ನವದೆಹಲಿ; ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ನಡುವೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸುರಕ್ಷೆ ದೃಷ್ಟಿಯಿಂದ ನೀಡುವ ರಾಪಿಡ್‌ ಟೆಸ್ಟಿಂಗ್‌ ಕಿಟ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದು ಕಳಪೆ ಗುಣಮಟ್ಟದ್ದಾಗಿದೆ ಎಂಬ ಆರೋಪ ಕೇಳಿಬಂದಿದೆ.

ಗುಣಮಟ್ಟ ಪರೀಕ್ಷೆಯಲ್ಲಿ ಕೆಲ ಕಿಟ್ ಗಳು ವಿಫಲವಾಗಿದ್ದು, ಇಂತಹ ಕಿಟ್‌ಗಳನ್ನು ನಮ್ಮ ದೇಶದ ವೈದ್ಯರು ಬಳಸುವುದರಿಂದ ಯಾವುದೇ ಸುರಕ್ಷತೆ ಅವರಿಗೆ ಸಿಗಲ್ಲ. ಹೀಗಾಗಿ ಅವರಿಗೂ ಕೊರೊನ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದು ಹಲವರ ಆರೋಪ.

ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸುರಕ್ಷೆ ನೀಡುವ ಸಲುವಾಗಿ ಭಾರತ ಚೀನಾದ 3 ಕಂಪೆನಿಗಳಿಂದ ಸುಮಾರು 6.5 ಲಕ್ಷ ರಾಪಿಡ್‌ ಟೆಸ್ಟಿಂಗ್‌ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಭಾರತ ನಿನ್ನೆಯೇ ಚೀನಾಕ್ಕೆ ವಿಮಾನವನ್ನು ಕಳುಹಿಸಿದ್ದು, ಇಂದು ರಾಪಿಡ್ ಟೆಸ್ಟಿಂಗ್ ಕಿಟ್ ಗಳು ಭಾರತದ ಕೈಸೇರಲಿದೆ.

ಆದರೆ ಚೀನಾ ಪ್ರಸ್ತುತ ರವಾನಿಸಿರುವ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕೆಲವು ಕಳಪೆ ಗುಣಮಟ್ಟದ ಕಿಟ್‌ಗಳಾಗಿವೆ. ಇವು ನಿರುಪಯುಕ್ತವಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಇನ್ನು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾದ ಸರಕುಗಳು ಭಾರತದ ದೊಡ್ಡ ಖಾಸಗಿ ಕಂಪನಿಗಳಿಂದ ದೇಣಿಗೆಯಾಗಿ ಸ್ವೀಕರಿಸಲ್ಪಟ್ಟವು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಚೀನಾ ಈ ಕಿಟ್‌ಗಳನ್ನು ಭಾರತ ಸರ್ಕಾರಕ್ಕೆ ದಾನವಾಗಿ ನೀಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಏಪ್ರಿಲ್ 5 ರಂದು ಭಾರತಕ್ಕೆ ಆಗಮಿಸಿದ 1,70,000 ಪಿಪಿಇ ಕಿಟ್‌ಗಳಲ್ಲಿ ಸುಮಾರು 50,000 ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ. 30,000 ಮತ್ತು 10,000 ಪಿಪಿಇ ಕಿಟ್‌ಗಳನ್ನು ಹೊಂದಿರುವ ಎರಡು ಸಣ್ಣ ಸರಕುಗಳು ಸಹ ಪರೀಕ್ಷೆಗಳಲ್ಲಿ ವಿಫಲವಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button