*ಚೆಕ್ ಬೌನ್ಸ್ ಪ್ರಕರಣ; ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಭಾರಿ ದಂಡ ವಿಧಿಸಿದ ಕೋರ್ಟ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಕೋರ್ಟ್ ಭಾರಿ ಪ್ರಮಾಣದ ದಂಡ ವಿಧಿಸಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರಿಗೆ 6 ಕೋಟಿ 96 ಲಕ್ಷದ 70 ಸಾವಿರ ರೂಪಾಯಿ ದಂಡ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಒಂದು ವೇಳೆ ದಂಡ ಪಾವತಿ ಮಾಡದಿದ್ದರೆ 6 ತಿಂಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದೆ. ಡಂದದ ಹಣದಲ್ಲಿ 6,96,60,000 ದೂರುದಾರರಿಗೆ ಪರಿಹಾರವಾಗಿ ನೀಡಬೇಕು. ಉಳಿದ 10 ಸಾವಿರ ರೂಪಾಯಿ ಸರ್ಕಾರಕ್ಕೆ ದಂದವಾಗಿ ಪಾವತಿಸಲು ಸೂಚಿಸಿದೆ.
ಆಕಾಶ್ ಆಡಿಯೋ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ 2011ರಲ್ಲಿ ರಾಜೇಶ್ ಎಕ್ಸ್ ಪೋರ್ಟ್ ಗೆ 6.60ಕೋಟಿ ಬಾಕಿ ಪಾವತಿಯ ಚೆಕ್ ನೀಡಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ವಿರುದ್ಧ ರಾಜೇಶ್ ಎಕ್ಸ್ ಪೋರ್ಟ್ ಕೇಸ್ ದಾಖಲಿಸಿತ್ತು. ಆದರೆ ಮಧು ಬಂಗಾರಪ್ಪ ಜಾಮೀನು ಪಡೆದುಕೊಂಡಿದ್ದರು. ಕೋರ್ಟ್ ನಲ್ಲಿ 50 ಲಕ್ಷ ನೀಡಿ ಉಳಿದ ಹಣ ಪಾವತಿಸಿರಲಿಲ್ಲ. ಜ.30ರೊಳಗೆ 6.10 ಲಕ್ಷ ಪಾವತಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ಜನಪ್ರತಿನಿಧಿಗಳ ಕೋರ್ಟ್ ಈ ಮುಚ್ಚಳಿಕೆಯನ್ನು ಒಪ್ಪಿಲ್ಲ. ಸಚಿವರ ಮನವಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ