Latest

ಯುವ ಸಬಲೀಕರಣ, ಮತದಾನ ಜಾಗೃತಿ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಹಾಗೂ ಜೆಎನ್ ಮೆಡಿಕಲ್ ಕಾಲೇಜುಗಳ ಸಂಯುಕ್ತಆಶ್ರಯದಲ್ಲಿ ನಗರದ ಜೆಎನ್ ಮೆಡಿಕಲ್ ಕಾಲೇಜಿನ ಜೀರಗೆ ಭವನದಲ್ಲಿ ಸಂಕಲ್ಪದಿಂದ ಸಿದ್ಧಿ ಯುವ ಸಬಲೀಕರಣ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೆಎಲ್ಇ ವಿವಿ ಆಡಳಿತಾಧಿಕಾರಿ ಎಸ್.ಜಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆಉಪನ್ಯಾಸ ನೀಡಿದರು.

ರಾಣಿ ಚನ್ನಮ್ಮ ವಿವಿಯ ಸಹಾಯಕ ಪ್ರಾಧ್ಯಾಪಕಿ ದೇವತಾ ಘಸ್ತಿ, ಡಾ.ಶಿವಸ್ವಾಮಿ, ಸಮೀವುಲ್ಲಾ, ನಿವೃತ್ತ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಎಸ್.ಯು. ಜಮಾದಾರ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

Home add -Advt

ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಆರ್.ಆರ್. ಮುತಾಲಿಕ ದೇಸಾಯಿ,ಜಿಲ್ಲಾ ಯುವ ಸಮನ್ವಯ ಅಧಿಕಾರಿ ಡಿ. ದಯಾನಂದ, ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ಅಶ್ವಿನಿ ನರಸನ್ನವರ, ವಿಕಾಸ ಎಂ., ಎಂ.ಪಿ ಮರನೂರ, ಮಲ್ಲಯ್ಯ ಕರಡಿ ಹಾಗೂ ನೆಹರು ಯುವ ಕೇಂದ್ರದ ಸ್ವಯಂ ಸೇವಕರು, ಎನ್ನೆಸ್ಸೆಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button