ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಮತ್ತೊಂದು ಭೀಕರ ದುರಂತ ಸಂಭವಿಸಿದ್ದು, ಭಾರಿ ಮಳೆಯ ನಡುವೆ ಉಕ್ಕಿ ಹರಿಯುತ್ತಿದ್ದ ನರ್ಮದಾ ನದಿಗೆ ಬಸ್ ಪಲ್ಟಿಯಾಗಿ ಬಿದ್ದು, 13 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಧರ್ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಸರ್ಕಾರಿ ರಸ್ತೆ ಸಾರಿಗೆ ನಿಗಮದ ಬಸ್, ಧರ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದು, ಪುಣೆಯಿಂದ ಇಂಧೋರ್ ಗೆ ತೆರಳುತ್ತಿದ್ದ ಬಸ್ ಧರ್ ಜಿಲ್ಲೆಯಲ್ಲಿ ಸೇತುವೆ ಮೇಲೆ ತೆರಳುತ್ತಿದ್ದಾಗ ನರ್ಮದಾ ನದಿಗೆ ಪಲ್ಟಿಯಾಗಿ ಬಿದ್ದಿದೆ. ನದಿಯಲ್ಲಿ ನೀರಿನ ರಭಸ ಜೋರಾಗಿದ್ದರಿಂದ ಬಸ್ ನಲ್ಲಿದ್ದ ಹಲವು ಪ್ರಯಾಣಿಕರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ.
ಸಧ್ಯದ ಮಾಹಿತಿ ಪ್ರಕಾರ 13 ಪ್ರಯಾಣಿಕರು ಸಾವನ್ನಪ್ಪಿದ್ದು, 9 ಶವಗಳನ್ನು ನೀರಿನಿಂದ ಮೇಲೆತ್ತಲಾಗಿದೆ.27 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದಿಬಂದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಭೀಕರ ಅಪಘಾತ; ಸ್ಥಳದಲ್ಲೇ ನಾಲ್ವರ ದುರ್ಮರಣ
ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಖಚಿತ; ಸಿಎಂ ಬೊಮ್ಮಾಯಿ ವಿಶ್ವಾಸ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ