Latest

ಶಿಕ್ಷೆಯ ತೀರ್ಪು ಓದುತ್ತಿರುವಾಗಲೇ ಕೋರ್ಟ್ ನಿಂದ ಪರಾರಿಯಾದ ಅಪರಾಧಿ

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಕೋರ್ಟ್ ನಲ್ಲಿ ತೀರ್ಪು ಓದುತ್ತಿರುವಾಗಲೇ ಅಪರಾಧಿ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದಿದೆ.

ಕೋರ್ಟ್ ನಲ್ಲಿ ನ್ಯಾಯಾಧೀಶರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಓರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದರು. ಶಿಕ್ಷೆ ಪ್ರಮಾಣವನ್ನು ಕೇಳುತ್ತಲೇ ಅಪರಾಧಿ ಆಘತಕ್ಕೊಳಗಾಗಿದ್ದು, ಸಿಕ್ಕ ಅವಕಾಶವನ್ನೇ ಬಳಸಿಕೊಂಡು ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಅಪರಾಧಿಯನ್ನು ಜಿತೇಂದ್ರ ಭಿಲ್ ಎಂದು ಗುರುತಿಸಲಾಗಿದೆ. ರಾಜಗಢ ಎಸ್ಪಿ ಪ್ರದೀಪ್ ಶರ್ಮಾ ಸೇರಿದಂತೆ ಹಲವು ಪೊಲೀಸರು ತಪ್ಪಿಸಿಕೊಂದ ಕೈದಿಗಾಗಿ ಶೋಧ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button