ಮ್ಯಾಗಿ ಪ್ರಿಯರಿಗೆ ಶಾಕ್

 ಹೆಚ್ಚಾಗಲಿದೆ ದರ

 

ಪ್ರಗತಿ ವಾಹಿನಿ ಸುದ್ದಿ ಮುಂಬೈ –

ಅಬಾಲವೃದ್ಧರಾದಿಯಾಗಿ ಇಷ್ಟಪಡುವ ಜನಪ್ರಿಯ ತಿನಿಸು ಮ್ಯಾಗಿ ನ್ಯೂಡಲ್ಸ್ ದರ ಸಧ್ಯದಲ್ಲೇ ಹೆಚ್ಚಳವಾಗಲಿದೆ. ಮ್ಯಾಗಿ ಉತ್ಪಾದಕ ಸಂಸ್ಥೆ ನೆಸ್ಲೆ ಈ ಬಗ್ಗೆ ಖಚಿತಪಡಿಸಿದೆ.

ಮ್ಯಾಗಿ ನ್ಯೂಡಲ್ಸ್ ಐದೇ ನಿಮಿಷದಲ್ಲಿ ತಯಾರು ಮಾಡಬಲ್ಲ ತಿನಿಸಾಗಿ ಪ್ರಚಾರ ಪಡೆಯಿತು. ಶಾಲೆಯಿಂದ ಬರುವ ಮಕ್ಕಳಿಗೆ ತಕ್ಷಣದಲ್ಲಿ ತಯಾರಿಸಿ ಕೊಡಬಲ್ಲ ತಿನಿಸು ಎಂದು ಪ್ರಚಾರ ಪಡೆದ ಮ್ಯಾಗಿ ಕ್ಷಿಪ್ರ ಅವಧಿಯಲ್ಲಿ ದೇಶಾದ್ಯಂತ ಮನೆ ಮಾತಾಯಿತು.

ಕೇವಲ ಮಕ್ಕಳಲ್ಲದೆ ಪ್ರತಿಯೊಬ್ಬರು ಮ್ಯಾಗಿ ನ್ಯೂಡಲ್ಸ್‌ನ ವಿಶಿಷ್ಟ ರುಚಿಗೆ ಮಾರು ಹೋಗಿದ್ದಾರೆ. ಈ ನಡುವೆ ಕೆಲ ವರ್ಷಗಳ ಹಿಂದೆ ಮ್ಯಾಗಿಯ ಗುಣಮಟ್ಟದ ಬಗ್ಗೆ ವಿವಾಧ ಉಂಟಾಗಿತ್ತಾದರೂ ಬಳಿಕ ಕಂಪನಿ ಮತ್ತೆ ಮ್ಯಾಗಿಯನ್ನು ಮೊದಲಿನ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಮ್ಯಾಗಿಯನ್ನು ಹೋಲುವ ಬೇರೆ ಬೇರೆ ನ್ಯೂಡಲ್ಸ್‌ಗಳ ನಡುವೆಯೂ ಮ್ಯಾಗಿ ಈಗಲೂ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲೇ ನಿಂತಿದೆ.

ಈ ನಡುವೆ ಬೇರೆ ಬೇರೆ ಕಾರಣಗಳಿಗಾಗಿ ಎಲ್ಲಾ ವಸ್ತುಗಳ ದರವೂ ಏರುತ್ತಿದ್ದು ಮ್ಯಾಗಿ ಈವರೆಗೆ ತನ್ನ ದರವನ್ನು ಏರಿಸಿರಲಿಲ್ಲ. ಆದರೆ ಸಾಮಗ್ರಿಗಳ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಮ್ಯಾಗಿ ಸಹ ಈಗ ಅನಿವಾರ್ಯವಾಗಿ ತನ್ನ ದರ ಏರಿಸಿಕೊಳ್ಳಲು ಮುಂದಾಗಿದೆ.

ಪ್ರಸ್ತುತ ೧೨ ರೂ.ಗೆ ಮಾರಾಟವಾಗುತ್ತಿದ್ದ ಮ್ಯಾಗಿ ಮಸಾಲಾ ೭೦ ಗ್ರಾಂ ಪ್ಯಾಕ್‌ಗೆ ೧೪ ರೂ. ಆಗಲಿದೆ. ೧೪೦ ಗ್ರಾಂ ಪ್ಯಾಕ್ ಮೇಲೆ ೩ ರೂ. ಹೆಚ್ಚಳವಾಗಲಿದೆ. ೯೫ ರೂ. ಇದ್ದ ೫೬೦ ಗ್ರಾಂ ಪ್ಯಾಕ್ ಬೆಲೆ ೧೦೫ ರೂ. ಆಗಲಿದೆ.

ಮ್ಯಾಗಿ ಅಲ್ಲದೆ ನೆಸ್ಲೆ ಕಂಪನಿಯ ಇತರ ಉತ್ಪಾದನೆಗಳಾದ ಕಾಫಿ ಪುಡಿ, ಹಾಲಿನ ಪುಡಿ, ಟೀ ಪುಡಿಯ ಬೆಲೆಯೂ ಏರಿಕೆಯಾಗಲಿದೆ ಎಂದು ವರದಿಯಾಗಿದೆ.

ತಾಯಿಯ ಗೆಳತಿಯೊಂದಿಗೇ ಸಂಪರ್ಕದಲ್ಲಿದ್ದೆ: ಸತ್ಯ ಬಿಚ್ಚಿಟ್ಟ ರಿಯಾಲಿಟಿ ಶೋ ಸ್ಪರ್ಧಿ !

ಬೆಳಗಾವಿ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ನಾಳೆ ರಜೆ ಇಲ್ಲ – ಜಿಲ್ಲಾಧಿಕಾರಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button