ಪ್ರಗತಿವಾಹಿನಿ ಸುದ್ದಿ; ಮಹಾಲಿಂಗಪುರ: ಮಹಾಲಿಂಗಪುರದ ಪುರಸಭೆ ಚುನಾವಣೆ ವೇಳೆ ನ.9ರಂದು ನಡೆದಿದ್ದ ನೂಕಾಟ-ತಳ್ಳಾಟ ಪ್ರಕರಣದಲ್ಲಿ ಗಾಯಗೊಂಡಿದ್ದ ಪುರಸಭೆ ಸದಸ್ಯೆಗೆ ಇದೀಗ ಗರ್ಭಪಾತವಾಗಿದೆ.
ಬಿಜೆಪಿ ಶಾಸಕ ಸಿದ್ದು ಸವದಿ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರನ್ನು ತಳ್ಳಿದ್ದರು. ಈ ವೇಳೆ ಚಾಂದಿನಿ ಆಯತಪ್ಪಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಇದೀಗ ಚಾಂದಿನಿಗೆ ಗರ್ಭಪಾತವಾಗಿದೆ ಎಂದು ತಿಳಿದಿಬಂದಿದೆ.
ಪುರಸಭೆ ಚುನಾವಣೆ ವೇಳೆ ಚಾಂದಿನಿ ನಾಯಕ್ ಕಾಂಗ್ರೆಸ್ ಗೆ ಬೆಂಬಲ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಹಲವರು ಚಾಂದಿನಿ ನಾಯಕ್ ಪುರಸಭೆಗೆ ಪ್ರವೇಶಿಸದಂತೆ ತದೆದಿದ್ದಾರೆ. ಆದಾಗ್ಯೂ ಚಾಂದಿನಿ ಪುರಸಭೆ ಪ್ರವೇಶಕ್ಕೆ ಮುಂದಾದಾಗ ಸಿದ್ದು ಸವದಿ ಸೇರಿದಂತೆ ಹಲವರು ಎಳೆದಾಡಿದ್ದರು. ನೂಕಾಟ ತಳ್ಳಾಟ ನಡೆದು ಚಾಂದಿನಿ ನಾಯಕ್ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು.
ಚಾಂದಿನಿ ನಾಯಕ್ ಗೆ ಹೊಟ್ಟೆ ಭಾಗದಲ್ಲಿ ಪೆಟ್ಟಾಗಿತ್ತು ಎನ್ನಲಾಗಿತ್ತು. ಇದೀಗ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಗೆ ಗರ್ಭಪಾತವಾಗಿದೆ ಎಂದು ತಿಳಿದುಬಂದಿದೆ. ಪುರಸಭೆ ಪಟ್ಟಕ್ಕಾಗಿ ಇನ್ನೂ ಪ್ರಪಂಚವನ್ನೇ ನೋಡದ ಹಸುಗೂಸು ಹೊಟ್ಟೆಯಲ್ಲೇ ಬಲಿಯಾದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ