Kannada News

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಸಾತ್ತ್ವಿಕ ಕಲೆ’

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಸಾತ್ತ್ವಿಕ ಕಲೆ’ 

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಸಾತ್ತ್ವಿಕ ಕಲೆ’ ಈ ವಿಷಯದ ಸಂಶೋಧನೆಯು ವ್ಯಾಂಕೋವರ್, ಕೆನಡಾದಲ್ಲಿನ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡನೆ !
ಅಧ್ಯಾತ್ಮ ಶಾಸ್ತ್ರಾನುಸಾರ ಬಿಡಿಸಿದ ದೇವತೆಗಳ ಕಲಾಕೃತಿಗಳಲ್ಲಿ ಸಾಮಾಜಿಕ ಪರಿವರ್ತನೆ ಮಾಡುವ ಕ್ಷಮತೆ ಇರುವುದು !
ಕಲಾಕೃತಿಯಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು, ಅಂದರೆ ಕಲಾಕೃತಿಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಅಧ್ಯಯನ ಮಾಡಿದರೆ ನಮ್ಮ ಗಮನಕ್ಕೆ ಬರುವುದೇನೆಂದರೆ, ಇಲ್ಲಿಯ ವರೆಗೆ ಕಲಾಕೃತಿಗಳನ್ನು ಯಾವರೀತಿಯಲ್ಲಿ ಮೌಲ್ಯಾಂಕನವನ್ನು ನಾವು ಮಾಡಿದೆವೋ, ಅದನ್ನು ಮತ್ತೊಮ್ಮೆ ಮಾಡಬೇಕಾಗಬಹುದು. ಚಿತ್ರಕಾರನು ಎಷ್ಟೇ ಪ್ರಸಿದ್ಧನಾಗಿದ್ದರೂ, ಅವನು ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವಂತಹ ದೇವತೆಯ ಅಥವಾ ಇತರ ಯಾವುದೇ ಚಿತ್ರ ನಿರ್ಮಿಸಬಹುದು, ಎಂದಿಲ್ಲ.
ಸಕಾರಾತ್ಮಕ ಸ್ಪಂದನವನ್ನು ಪ್ರಕ್ಷೇಪಿಸುವ ಅಧ್ಯಾತ್ಮಿಕ ದೃಷ್ಟಿಕೋನದಿಂದ ಶುದ್ಧವಾಗಿರುವಂತಹ ಕಲಾಕೃತಿಯನ್ನು ನಿರ್ಮಿಸಲು ಕಲಾವಿದನು ಅಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತವಾಗಿರುವ ಮಾರ್ಗದರ್ಶಕರ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಕಲಾವಿದನು ಅಧ್ಯಾತ್ಮಶಾಸ್ತ್ರಕ್ಕನುಸಾರ ಬಿಡಿಸಿದ ದೇವತೆಗಳ ಚಿತ್ರವು ಸಕಾರಾತ್ಮಕ ಸ್ಪಂದನಗಳ ಮೂಲವಾಗಿದ್ದು ಅದರಿಂದ ಸಮಾಜ ಮತ್ತು ವಾತಾವರಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ ಹಾಗೂ ಇಂತಹ ಕಲಾಕೃತಿಗಳಲ್ಲಿ ಸಾಮಾಜಿಕ ಪರಿವರ್ತನೆಯನ್ನು ಮಾಡುವ ಕ್ಷಮತೆ ಇರುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೌ. ಕ್ರಿಸ್ಟಿ ಲ್ಯೂಂಗ್ ಇವರು ಪ್ರತಿಪಾದಿಸಿದರು.
ವ್ಯಾಂಕೋವರ್, ಕೆನಡಾದಲ್ಲಿ ೯ ರಿಂದ ೧೩ ಜುಲೈ ಈ ಕಾಲಾವಧಿಯಲ್ಲಿ MAKING/INSEA 2019 ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ಸೌ. ಕ್ರಿಸ್ಟಿ ಲ್ಯೂಂಗ್‌ರವರು ಈ ಪರಿಷತ್ತಿನಲ್ಲಿ ‘ಆಧ್ಯಾತ್ಮಿಕ ಉನ್ನತಿಗಾಗಿ ಸಾತ್ತ್ವಿಕ ಕಲೆಯ ಅಧ್ಯಯನ, ಅಭ್ಯಾಸ ಮತ್ತು ಅಧ್ಯಾಪನ’ ಈ ಶೋಧಪ್ರಬಂಧವನ್ನು ಜುಲೈ ೧೧ ರಂದು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರು ಈ ಶೋಧಪ್ರಬಂಧದ ಲೇಖಕರಾಗಿದ್ದಾರೆ. ಈ ಪರಿಷತ್ತಿನ ಆಯೋಜನೆಯನ್ನು ವ್ಯಾಂಕೋವರ್, ಕೆನಡಾದಲ್ಲಿನ ಯುನಿವರ್ಸಿಟಿ ಆಫ್ ಬ್ರಿಟಿಶ ಕೊಲಂಬಿಯನ್‌ದಲ್ಲಿ ಮಾಡಲಾಗಿತ್ತು.
ಸೌ. ಕ್ರಿಸ್ಟಿ ಲ್ಯೂಂಗ್ ಇವರು ವಿವಿಧ ಚಿತ್ರಗಳ ಸಂದರ್ಭದಲ್ಲಿ ಮಾಡಿದಂತಹ ಶೋಧನೆಯ ಅಂತರ್ಗತದ ಮಾಡಿದ ವಿವಿಧ ಪ್ರಯೋಗಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಇದರಲ್ಲಿ ಅವರು ‘ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರ್‌ಫೆರನ್ಸ್ ಫೊಟೋಗ್ರಾಫಿ)’ ಈ ತಂತ್ರಜ್ಞಾನವನ್ನು ಉಪಯೋಗಿಸಿ ಮಾಡಿದ ಸಂಶೋಧನೆಯ ಮಾಹಿತಿಯನ್ನು ನೀಡಿದರು. ಈ ತಂತ್ರಜ್ಞಾನದ ಸಹಾಯದಿಂದ ವಸ್ತು ಮತ್ತು ವ್ಯಕ್ತಿಯ ಊರ್ಜಾಕ್ಷೇತ್ರ(‘ಆರಾ’ದ) ಅಭ್ಯಾಸ ಮಾಡಲು ಬರುತ್ತದೆ. ಈ ತಂತ್ರಜ್ಞಾನದಿಂದ ಬಿಡಿಸಿದಂತಹ ಛಾಯಾಚಿತ್ರಗಳಲ್ಲಿ (‘ಪಿಪ್’ ಚಿತ್ರಗಳಲ್ಲಿ) ಸಜೀವ ಅಥವಾ ನಿರ್ಜೀವ ವಸ್ತುಗಳು ಊರ್ಜಾಕ್ಷೇತ್ರಗಳನ್ನು ವಿವಿಧ ಬಣ್ಣಗಳಲ್ಲಿ ನೋಡಲು ಬರುತ್ತದೆ. ಅದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನವು ಬಣ್ಣಗಳ ಮಾಧ್ಯಮದಿಂದ ನೋಡುವ ಸೌಲಭ್ಯವಿದೆ.
ಓರ್ವ ಉನ್ನತ ಮಟ್ಟದ ಸಂತರ ಮಾರ್ಗದರ್ಶನದಲ್ಲಿ ಸಾಧಕ ಚಿತ್ರಕಾರನು ೧೨ ವರ್ಷಗಳ ಕಾಲಾವಧಿಯಲ್ಲಿ ಗಣಕಯಂತ್ರದಲ್ಲಿ ಬಿಡಿಸಿದಂತಹ ಶ್ರೀ ಗಣಪತಿಯ ೬ ಚಿತ್ರಗಳ ‘ಪಿಪ್’ ಚಿತ್ರವನ್ನು ತೋರಿಸಲಾಯಿತು. ಈ ಚಿತ್ರದಲ್ಲಿ ಶ್ರೀ ಗಣೇಶತತ್ತ್ವದ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಸಕಾರಾತ್ಮಕ ಸ್ಪಂದನದ ಪ್ರಮಾಣ ‘ಪಿಪ್’ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ತದ್ವಿರುದ್ಧ ಓರ್ವ ಪ್ರಸಿದ್ಧ ಚಿತ್ರಕಾರನು ವ್ಯವಸಾಯದ ಉದ್ದೇಶದಿಂದ ಬಿಡಿಸಿದ ದೇವತೆಗಳ ವಿಡಂಬನಾತ್ಮಕ ಚಿತ್ರದಿಂದ ಪ್ರಕ್ಷೇಪಿತವಾಗುವ ನಕಾರಾತ್ಮಕ ಸ್ಪಂದನವು ಆ ಚಿತ್ರದ ‘ಪಿಪ್’ ಚಿತ್ರದಲ್ಲಿ ಸ್ಪಷ್ಟವಾಗಿ ಗಮನಕ್ಕೆ ಬರುತ್ತಿತ್ತು.
ಸೌ. ಕ್ರಿಸ್ಟಿ ಲ್ಯೂಂಗ್ ಇವರು ‘ಯೂನಿವರ್ಸಲ್ ಥರ್ಮೋ ಸ್ಕ್ಯಾನರ್ ’(ಯು.ಟಿ.ಎಸ್.)ನ ಮಾಜಿ ಅಣುವೈಜ್ಞಾನಿಕ  ಡಾ. ಮನ್ನಮ್ ಮೂರ್ತಿ ಇವರು ವಿಕಸಿತಗೊಳಿಸಿದ ಉಪಕರಣದ ಮೂಲಕ ಮಾಡಿದಂತಹ ಸಂಶೋಧನೆಯ ಮಾಹಿತಿಯನ್ನು ನೀಡಿದರು. ಈ ಉಪಕರಣದ ಮೂಲಕ ಯಾವುದೇ ಸಜೀವ ಅಥವಾ ನಿರ್ಜಿವ ವಸ್ತುವಿನಲ್ಲಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆ, ಅದೇರೀತಿ ಆ ವಸ್ತುವಿನ ಸುತ್ತಲು ಇರುವಂತಹ ಒಟ್ಟು ಪ್ರಭಾವಲಯ ಅಳೆಯಲು ಬರುತ್ತದೆ. ಈ ಉಪಕರಣದ ಮೂಲಕ ಮಾಡಿದಂತಹ ಸಂಶೋಧನೆಯ ನಿಷ್ಕರ್ಷವು ‘ಪಿಪ್ (ಪಾಲಿಕಾಂಟ್ರಾಸ್ಟ್  ಇಂಟರ್‌ಫರೆನ್ಸ್ ಫೋಟೋಗ್ರಾಫಿ)’ ತಂತ್ರಜ್ಞಾನದ ಮೂಲಕ ಮಾಡಿದಂತಹ ಪ್ರಯೋಗದಲ್ಲಿ ಸಿಕ್ಕಿದ ನಿಷ್ಕರ್ಷಕ್ಕೆ ಸಮಾನವಿತ್ತು.
ಈ ಸಮಯದಲ್ಲಿ ಸೌ. ಕ್ರಿಸ್ಟಿ ಲ್ಯೂಂಗ್ ಇವರು ಅಧ್ಯಾತ್ಮಶಾಸ್ತ್ರಾನುಸಾರ ಬಿಡಿಸಿದಂತಹ ದೇವತೆಗಳ ಚಿತ್ರ ಮತ್ತು ವಿಡಂಬನಾತ್ಮಕ ಚಿತ್ರಗಳತ್ತ ನೋಡಿ  ಸೂಕ್ಷ್ಮ ಸ್ಪಂದನವನ್ನು ಅರಿಯುವ ಕ್ಷಮತೆ ಇರುವ ಸಾಧಕರಿಗೆ ಕಾಣುವ ಸೂಕ್ಷ್ಮದಲ್ಲಿಯ ಪ್ರಕ್ರಿಯೆ ತಿಳಿಯಪಡಿಸಲು ಬಿಡಿಸಿದ ಚಿತ್ರ (ಸೂಕ್ಷ್ಮ ಚಿತ್ರ)ತೋರಿಸಲಾಯಿತು. ಈ ಸೂಕ್ಷ್ಮ ಚಿತ್ರಗಳನ್ನು ಪ್ರಭಾವಳಿ ಅಳೆಯುವ ಉಪಕರಣದ ಛಾಯಾಚಿತ್ರಕ್ಕಿಂತ ೧೦ ಸಾವಿರಪಟ್ಟು ಹೆಚ್ಚು ಸೂಕ್ಷ್ಮದಲ್ಲಿಯ ಪ್ರಕ್ರಿಯೆಯನ್ನು ತೋರಿಸುತ್ತದೆ. ಆದ್ದರಿಂದ ಇದು ಮಹತ್ವದ್ದಾಗಿದೆ.
ಇದರಲ್ಲಿ ಖ್ಯಾತ ಚಿತ್ರಕಾರನು ಬಿಡಿಸಿದ ದೇವತೆಯ ವಿಡಂಬನಾತ್ಮಕ ಚಿತ್ರದಲ್ಲಿ ನಕಾರಾತ್ಮಕ ಸ್ಪಂದನಗಳು ಮತ್ತು ಅಧ್ಯಾತ್ಮಶಾಸ್ತ್ರಾನುಸಾರ ಬಿಡಿಸಿದ ದೇವತೆಗಳ ಚಿತ್ರದಲ್ಲಿ ಸಕಾರಾತ್ಮಕ ಸ್ಪಂದನಗಳು ಇರುತ್ತದೆ ಎಂಬುದು ಕಂಡುಬಂದಿತು.
ಈ ಪ್ರಯೋಗದ ಕೊನೆಯಲ್ಲಿ ಸೌ. ಕ್ರಿಸ್ಟಿ ಲ್ಯೂಂಗ್ ಇವರು ‘ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಖರೀದಿಸಿದ ನಕಾರಾತ್ಮಕ ಸ್ಪಂದನವನ್ನು ಪ್ರಕ್ಷೇಪಿಸುವ ಚಿತ್ರ, ಅದು ಓರ್ವ ಪ್ರಸಿದ್ಧ ಚಿತ್ರಕಾರನು ಬಿಡಿಸಿದ್ದರೂ, ಅದನ್ನು ಮನೆಯಲ್ಲಿ ಹಾಕುವುದು ಯೋಗ್ಯವೇ ?’, ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಉಪಸ್ಥಿತರಿದ್ದವರಿಗೆ ಕೇವಲ ಅಂತರ್ಮುಖವಾಗಲು ಮಾತ್ರವಲ್ಲದೇ, ಕಲಾಕೃತಿಯನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಲು ದೃಷ್ಟಿಕೋನ ನೀಡುವಂತಹದ್ದಾಗಿತ್ತು.
ದೇವತೆಯ ಚಿತ್ರದ ನಂತರ ಸೌ. ಕ್ರಿಸ್ಟಿ ಲ್ಯೂಂಗ್ ಇವರು ವ್ಯಕ್ತಿಚಿತ್ರದ (‘ಪೋಟ್ರೇಟ್’ನ) ವಿಷಯವನ್ನು ಮಂಡಿಸಿದರು. ಅದರಲ್ಲಿ ಅವರು ‘ಮೊನಾ ಲಿಸಾ’ ಇದು ಜಗತ್ಪ್ರಸಿದ್ಧ ವ್ಯಕ್ತಿಚಿತ್ರ ಮತ್ತು ಓರ್ವ ಸಾಧನೆಯನ್ನು ಮಾಡುವ ಚಿತ್ರಕಾರನು ಬಿಡಿಸಿದ ಓರ್ವ ಸಂತರ ಚಿತ್ರ ಹೀಗೆ ಎರಡರದ್ದು ‘ಪಿಪ್’ (ಪಾಲಿಕಾಂಟ್ರಾಸ್ಟ್ ಇಂಟರ್‌ಫರೆನ್ಸ್ ಫೋಟೋಗ್ರಾಫಿ)’ ತಂತ್ರಜ್ಞಾನದ ಮೂಲಕ ಹಾಗೂ ‘ಯುನಿವರ್ಸಲ್ ಥರ್ಮೋ ಸ್ಕ್ಯಾನರ್’ (ಯುಟಿಎಸ್) ಈ ಉಪಕರಣದ ಮೂಲಕ ಮಾಡಿದ ಶೋಧನೆಯ ಮಾಹಿತಿಯನ್ನು ನೀಡಿದರು .
‘ಮೋನಾ ಲಿಸಾ’ ಇದು ಜಗತ್ಪ್ರಸಿದ್ಧ ವ್ಯಕ್ತಿ ಚಿತ್ರದಲ್ಲಿ ನಕಾರಾತ್ಮಕ, ಅದೇರೀತಿ ಸಂತರ ಚಿತ್ರದಲ್ಲಿ ಸಕಾರಾತ್ಮಕ ಸ್ಪಂದನ ಪ್ರಕ್ಷೇಪಿತವಾಗುತ್ತಿತ್ತು ಎಂಬುದು ಎರಡು ಉಪಕರಣದ ಮೂಲಕ ಮಾಡಿದಂತಹ ಸಂಶೋಧನೆಯಲ್ಲಿ ಕಂಡುಬಂದಿತು. ಇದರ ಕಾರಣವನ್ನು ಹೇಳಿದ ಸೌ. ಡ್ರಾಗನಾ ಕಿಸ್ಲೋಕ್ಸ್ಕಿ, “ಸಂತರಲ್ಲಿ ತುಂಬಾ ಪ್ರಮಾಣದಲ್ಲಿ ಊರ್ಜೆ ಇರುತ್ತದೆ. ಆದ್ದರಿಂದ ಸಂತರ ಚಿತ್ರದಲ್ಲಿಯೂ ಸಕಾರಾತ್ಮಕ ಊರ್ಜೆ ಇರುತ್ತದೆ ಮತ್ತು ಅದರಿಂದ ನಮ್ಮೊಂದಿಗೆ ವಾತಾವರಣಕ್ಕೆ ಲಾಭವಾಗುತ್ತದೆ” ಎಂದು ಹೇಳಿದರು.
ಕೊನೆಯಲ್ಲಿ  ಕ್ರಿಸ್ಟಿ ಲ್ಯೂಂಗ್ ಇವರು ಶೋಧ ಪ್ರಬಂಧದ ಸಾರವನ್ನು ಮಂಡಿಸುತ್ತಾ, “ಖ್ಯಾತ ಚಿತ್ರಕಾರನು ಸಕಾರಾತ್ಮಕ ಸ್ಪಂದನ ಇರುವಂತಹ ಚಿತ್ರವನ್ನು ನಿಶ್ಚಿತವಾಗಿ ಬಿಡಿಸಬಹುದು ಎಂದಿಲ್ಲ. ನಾವು ಮಾಡಿದ ಅಧ್ಯಯನದಲ್ಲಿ ಜಗತ್ತಿನ ಎಲ್ಲಕ್ಕಿಂತ ದುಬಾರಿಯಾಗಿರುವ ೨೧ ಚಿತ್ರಗಳ ಪೈಕಿ ೨ ಚಿತ್ರಗಳಿಂದ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಹಾಗೂ ಉಳಿದ ಎಲ್ಲ ಚಿತ್ರಗಳಿಂದ ಸಂಪೂರ್ಣ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುವುದು ಕಂಡುಬಂದಿತು. ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧ ಕಲಾಕೃತಿ ನಿರ್ಮಿಸಲು ಮೊದಲು ಆ ಕಲಾಕೃತಿಯ ವಿಷಯವು ಸಾತ್ತ್ವಿಕ ಇರಬೇಕು ಮತ್ತು ಆ ವಿಷಯದಲ್ಲಿಯೂ ಸಕಾರಾತ್ಮಕ ಸ್ಪಂದನವು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಬಹುದು, ಈ ರೀತಿಯ ಚಿತ್ರವನ್ನು ಬಿಡಿಸಬೇಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button