ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳಗಾವಿ ಮಹಿಳಾ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿಗೆ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯಡಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆನಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಮಹಿಳೆಯರು ತಮ್ಮ ತಾಲೂಕಿನ/ಗ್ರಾಮದ ಬಾಪೂಜಿ ಸೇವಾ ಕೇಂದ್ರ/ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರಗಳಲ್ಲಿ https://sevasindhu.karnataka.gov.in ಮೂಲಕ ಡಿಸೆಂಬರ್ 22, 2023 ರ ಸಂಜೆ 5:30 ರ ಒಳಗೆ ಸಲ್ಲಿಸಬಹುದಾಗಿದೆ.
ಯೋಜನೆಗಳು:
ಉದ್ಯೋಗಿನಿ ಯೋಜನೆ:- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ: ಆದಾಯ ಮೀತಿ ರೂ.2 ಲಕ್ಷಗಳು, ವಯೋಮಿತಿ 18 ರಿಂದ 55 ವರ್ಷಗಳು, ಘಟಕ ವೆಚ್ಚ : ಕನಿಷ್ಠ ರೂ.1 ಲಕ್ಷದಿಂದ ಗರಿಷ್ಠ ರೂ.3 ಲಕ್ಷಗಳು, ಸಹಾಯಧನ ಶೇ.50 ರಷ್ಟು,
ಸಾಮಾನ್ಯ ವರ್ಗ: ಆದಾಯ ಮೀತಿ ರೂ.1.50 ಲಕ್ಷಗಳು, ಘಟಕ ವೆಚ್ಚ : ಕನಿಷ್ಠ ರೂ.1 ಲಕ್ಷದಿಂದ ಗರಿಷ್ಠ ರೂ.3 ಲಕ್ಷಗಳು, ಸಹಾಯಧನ ಶೇ.30 ರಷ್ಟು.
ಚೇತನಾ ಯೋಜನೆ:- ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ.30.000/- ಪ್ರೋತ್ಸಾಹಧನ ನೀಡಲಾಗುವುದು. ವಯೋಮಿತಿ 18 ವರ್ಷ ಮೇಲ್ಪಟ್ಟು.
ಧನಶ್ರೀ ಯೋಜನೆ:- (ಎಚ್.ಐ.ವಿ ಪೀಡಿತ/ಬಾದಿತ ಮಹಿಳೆಯರಿಗೆ)ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ.30.000/- ಗಳ ಪ್ರೋತ್ಸಾಹಧನ ನೀಡಲಾಗುವುದು. ವಯೋಮಿತಿ 18 ರಿಂದ 60 ವರ್ಷ
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ: ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು – ರೂ.30,000/- ಗಳ ಪ್ರೋತ್ಸಾಹಧನ ನೀಡಲಾಗುವುದು.
ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ: 1993-94 ಮತ್ತು 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ.30.000/- ಗಳ ಪ್ರೋತ್ಸಾಹಧನ ನೀಡಲಾಗುವುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು: ಜಾತಿ ಪ್ರಮಾಣ ಪತ್ರ, ಕುಟುಂಬ ವಾರ್ಷಿಕ ಆದಾಯ ಪ್ರಮಾಣ ಪತ್ರ, ವಿಳಾಸದ ದಾಖಲೆಗಳು (ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್ / ಪಡಿತರಚೀಟಿ / ಯಾವುದಾದರೊಂದು ದಾಖಲೆ ಯೋಜನಾ ವರದಿ (ಅರ್ಜಿಯಲ್ಲಿ ನೀಡಿರುವಂತೆ ತುಂಬಿ ಸಲ್ಲಿಸತಕ್ಕದ್ದು, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತೆರೆಯಲಾದ ಆಧಾರ ಸಿಡಿಂಗ ಆಗಿರುವ ಬ್ಯಾಂಕ್ ಖಾತೆ, ರಹವಾಸಿ ಪ್ರಮಾಣ ಪತ್ರ, ಚೇತನಾ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಅರ್ಜಿ ಸಲ್ಲಿಸುವವರು ಸ್ಥಳೀಯ ಸಮುದಾಯ ಆಧಾರಿತ ಸಂಸ್ಥೆಯವರಿಂದ ಪಡೆದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಉಪ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ