ಪ್ರಗತಿವಾಹಿನಿ ಸುದ್ದಿ, ಮುಂಬೈ: ಗರ್ಭಿಣಿಯನ್ನು ಸಾಲ ವಸೂಲಿಗಾರ ಟ್ರ್ಯಾಕ್ಟರ್ ಹಾಯಿಸಿ ಕೊಂದ ಘಟನೆಗೆ ತೀವ್ರ ಖೇದ ವ್ಯಕ್ತಪಡಿಸಿರುವ ಮಹೀಂದ್ರಾ ಗ್ರುಪ್ ಸಿಇಒ ಅನೀಶ್ ಶಾ ಇದೊಂದು “ಮಾನವ ದುರಂತ” ಎಂದು ಪ್ರತಿಕ್ರಿಯಿಸಿದ್ದಾರೆ.
ಜಾರ್ಖಂಡ್ ರಾಜ್ಯದ ಹಜಾರಿಬಾಗ್ ನಲ್ಲಿ ಸಾಲ ವಸೂಲಾತಿ ಏಜೆಂಟ್ ಒಬ್ಬ ಕಳೆದ ಗುರುವಾರ ರೈತರೊಬ್ಬರು ಟ್ರ್ಯಾಕ್ಟರ್ ಖರೀದಿಗಾಗಿ ಪಡೆದಿದ್ದ 1.2 ಲಕ್ಷ ರೂ. ಸಾಲದ ಬಾಕಿ ತೀರಿಸದ ಕಾರಣಕ್ಕೆ ರೈತನ ಮಗಳು, 27 ವರ್ಷ ವಯಸ್ಸಿನ ಮೂರು ತಿಂಗಳ ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಕೊಲೆಗೈದಿದ್ದ.
ಲಚಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಪ್ರತಿಭಟನೆ ನಡೆಸಿ ಮೃತ ಗರ್ಭಿಣಿ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದರು.
ಈ ಘಟನೆ ತಮಗೆ ತೀವ್ರ ದುಃಖವಾಗಿದ್ದು ತಮ್ಮನ್ನು ವಿಚಲಿತಗೊಳಿಸಿದೆ ಎಂದು ಪ್ರತಿಕ್ರಿಯಿಸಿರುವ ಅನೀಶ್ ಶಾ ಈ ಬಗ್ಗೆ ಕಂಪನಿಯಿಂದ ತನಿಖೆ ನಡೆಸಲಾಗುತ್ತದೆ. ಮೂರನೇ ವ್ಯಕ್ತಿಗಳನ್ನು ಸಾಲದ ಹಣ ವಸೂಲಾತಿಗೆ ಬಳಸುವ ಪದ್ಧತಿಯ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸ್ಪಾ ಯುವತಿಯೊಂದಿಗೆ ಅನುಚಿತ ವರ್ತನೆ; ಕಾಂಗ್ರೆಸ್ ಮುಖಂಡ ಪೊಲೀಸ್ ವಶಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ