*ಸ್ವಚ್ಛತಾಗಾರರಿಗೆ ಮೆಡಿಕಲ್ ಚೆಕ್ ಅಪ್ ಕಡ್ಡಾಯವಾಗಿ ಮಾಡಿಸಿ: ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾಗಾರರ ಆರೋಗ್ಯದ ಹಿತದೃಷ್ಟಿಯಿಂದ ತಾಲ್ಲೂಕಾ ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಮತ್ತು ಸ್ಚಚ್ಛತಾಗರರ ಸುರಕ್ಷತೆಗಾಗಿ ಕಡ್ಡಾಯವಾಗಿ ಸುರಕ್ಷಿತ ಪರಿಕರಗಳಾದ ಗ್ಲೌಜ, ಎಪರಾನ್, ಹೆಲ್ಮೆಟ್, ಗಮ್ ಬೂಟ್, ಸ್ಪೆಕ್ಟ್ ಮತ್ತು ಸ್ಯಾನಿಟೈಜರ್ ಗಳನ್ನು ನೀಡಬೇಕೆಂದು ಎಲ್ಲ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಸೆ. 23) ಜರುಗಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಮಿಷನ್ ಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ 13 ತಾಲ್ಲೂಕುಗಳಲ್ಲಿ ಪಿ.ಡಬ್ಲ್ಯೂ.ಎಮ್. ಘಟಕಗಳಲ್ಲಿ ಪ್ಲಾಸ್ಟಿಕ್ ವೇಸ್ಟ ಮ್ಯಾನೇಜಮೆಂಟ ಮಷೀನ್ಗಳನ್ನು ಅಳವಡಿಸಿ ಅಕ್ಟೋಬರ್ -2 ರಂದು ಉದ್ಘಾಟನೆಯನ್ನು ಮಾಡಬೇಕು. ಅಲ್ಲದೇ ಅಕ್ಟೋಬರ್ -2 ರಂದು ವಿಶೇಷ ಗ್ರಾಮ ಸಭೆ ನಡೆಸಿ ಮಾದರಿ ಗ್ರಾಮಗಳ ಘೋಷಣೆ ಮಾಡುವುದು. ಬಾಕಿ ಇರುವ ವೈಯಕ್ತಿಕ ಗೃಹ ಶೌಚಾಲಯಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸಿಸುವುದು.ಗೋಕಾಕ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಎಮ್.ಆರ್.ಎಫ್ (ವಸ್ತು ಪುಸ್ಸಂಪಾದನಾ ಸೌಲಭ್ಯ) ಘಟಕವನ್ನು ತ್ವರೀತಗತಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ರಾಹುಲ್ ಶಿಂಧೆ ಅವರು ತಿಳಿಸಿದರು.
ಸರ್ಕಾರದ ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಾದ ಸವಳು-ಜವಳು (ಭಾಧಿತ ಕೃಷಿ ಭೂಮಿಯ ಅಭೀವೃದ್ದಿ), ಬೂದು ನೀರು ನಿರ್ವಹಣಾ ಘಟಕ 1.0 ಹಾಗೂ 2.0, ಒಗ್ಗೂಡಿಸುವಿಕೆಯಡಿ ಸ್ಪೈಸ್ ಕ್ರಾಪ್, ಹಸಿರು ಪಥ, ರೈತ ಪಥ ಹಾಗೂ ಕೃಷಿ ಕವಚ ದಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಆದ್ಯತೆ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದರು. ಮನರೇಗಾ ಯೋಜನೆಯ ಗ್ರಾಮೀಣ ಜನರಿಗೆ ನಿರಂತರ ಕೆಲಸ ನೀಡುವುದು. ಎನ್.ಎಮ್.ಎಮ್. ಎಸ್ ಕುರಿತು ಪ್ರತಿ ನಿತ್ಯ ಗ್ರಾಮ ಪಂಚಾಯತ ಮತ್ತು ತಾಲ್ಲೂಕು ಪಂಚಾಯತಿಯಿಂದ ಸಂಬಂಧ ಪಟ್ಟ ಅಧಿಕಾರಿಗಳು ಶೇ 100 ರಷ್ಟು ಪರಿಶೀಲನೆ ಮಾಡುವುದು ಮುಂದಿನ ಸಭೆಯಲ್ಲಿ ಪ್ರಗತಿ ಪರಿಶೀಲನೆ ಪ್ರಗತಿ ಕಡಿಮೆ ಇದ್ದಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾಮಾಜಿಕ ಲೆಕ್ಕ ಪರಿಶೋದನೆ ಕುರಿತು ಬಾಕಿ ಇರುವ ಕಂಡಿಕೆಗಳನ್ನು ಅಡಹಾಕ್ ಕಮಿಟಿಯಲ್ಲಿ ಇತ್ಯರ್ಥಗೊಳಿಸಲು ತಾ.ಪಂ. ಇಒ ಗಳಿಗೆ ಹೇಳಿದರು. ಓಂಬುಡ್ಸ ಪರ್ಸನ್ ಸೂಚಿಸಿರುವ ವಸೂಲಾತಿ ಮೊತ್ತವನ್ನು ವಸೂಲಾತಿ ಮಾಡಲು ಸೂಚಿಸಿದರು. ಅತಿ ಹೆಚ್ಚು ಬಾಕಿ ಉಳಿದ 192.18 ಲಕ್ಷ ವಸೂಲಾತಿ ಬಗ್ಗೆ ಕ್ರಮ ವಹಿಸುಂತೆ ರಾಯಬಾಗ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
“ಸಕಾಲ ಯೋಜನೆ” ಯಡಿ ಕಾಲಮಿತಿ ಮೀರಿ ಬಾಕಿ ಉಳಿದ ಆರ್ಜಿಗಳನ್ನು ಮುಂದಿನ 2 ದಿನದಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು,. 15ನೇ ಹಣಕಾಸು ಯೋಜನೆ ಅಡಿ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ, ನೈಜ ಕಾಮಗಾರಿಗಳಿಗೆ ಪಾವತಿ ಮಾಡಿ ಪ್ರಗತಿ ಸಾಧಿಸುವುದು ಮತ್ತು ಬಾಕಿ ಇರುವ ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿ ನಂತರ ಹರ್ ಘರ್ ಜಲ್ ಗ್ರಾಮ ಎಂದು ಘೋಷಣೆ ಮಾಡಲು ಕ್ರಮವಹಿಸಲು ಸೂಚಿಸಿದರು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಮೇಲ್ಮಟ್ಟದ ನೀರು ಸಂಗ್ರಹಣಾ ಘಟಕಗಳನ್ನು ಮಾರ್ಗಸೂಚಿಗಳನ್ವಯ ಸ್ವಚ್ಚತೆ ಹಾಗೂ ಸುರಕ್ಷತೆಗೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಗಮನ ಹರಿಸಬೇಕೆಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.