
ಪ್ರಗತಿವಾಹಿನಿ ಸುದ್ದಿ: LGBTQ ಸಮುದಾಯದ ಪ್ರಭಾವಿ ಮೇಕಪ್ ಆರ್ಟಿಸ್ಟ್ ಮದ್ ಸಂಧು ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿರುವ ಘಟನೆ ನಡೆದಿದೆ.
ಪಂಜಾಬ್ ನ ಅಮೃತಸರದಲ್ಲಿ ಮದ್ ಸಂಧು ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಮದ್ ಸಂಧು ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಸಂಧು ಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಂಧು ತಮ್ಮ LGBTQ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಂದನೆಯನ್ನು ಎದುರಿಸುತ್ತಿದ್ದರು. ಟ್ರೋಲ್ ಹೊರತಾಗಿಯೂ, ಅವರು ಆನ್‌ಲೈನ್‌ನಲ್ಲಿ ಸಕ್ರಿಯರಾಗಿದ್ದರು. ಇನ್ಸ್ಟಾದಲ್ಲಿ 2.26 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಅವರು ಹೊಂದಿದ್ದರು. ಅವರು ಪಂಜಾಬಿ ಚಲನಚಿತ್ರ ಓಯೆ ಭೋಲೆ ಓಯೆಯಲ್ಲಿಯೂ ನಟಿಸಿದ್ದರು.
ಪಾಡ್‌ಕ್ಯಾಸ್ಟ್‌ಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮೇಕಪ್ ಆರ್ಟ್, ಸ್ವಯಂ ಅಭಿವ್ಯಕ್ತಿ ಮತ್ತು ಲಿಂಗ-ಸಂಬಂಧಿತ ವಿಷಯಗಳ ಬಗ್ಗೆ ಸಂಧು ಆಗಾಗ ಚರ್ಚಿಸುತ್ತಿದ್ದರು. ಅವರ ಫ್ಯಾಷನ್ ಆಯ್ಕೆಗಳು ಮತ್ತು ಚರ್ಚಿಸುವ ವಿಚಾರಗಳು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಭಾಅರಿ ಟೀಕೆಗೆ ಕಾಅರಣವಾಗಿತ್ತು.
ಗೋಲ್ಡಿ ಧಿಲ್ಲನ್ ಮತ್ತು ಜಗ್ಗಾ ಟ್ಯಾರಂಟರ್ನ್ ಈ ದಾಳಿಯ ಹೊಣೆ ಹೊತ್ತಿದ್ದಾರೆ ಎಂದು ಹೇಳಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಬಗ್ಗೆ ಇನ್ನೂ ಪರಿಶೀಲಿಸಲಾಗಿಲ್ಲ. ಗುಂಡಿನ ದಾಳಿಗೆ ಕಾರಣವಾದ ಸಂದರ್ಭ, ದಾಳಿಕೋರರ ಗುರುತು ಮತ್ತು ಉದ್ದೇಶ ಸ್ಪಷ್ಟವಾಗಿಲ್ಲ. ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




