ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.
ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯಲ್ಲಿರುವ ಹಾಗೂ ಕೆಲ ಹಿಂದೂ ದೇವರ ಕೆತ್ತನೆಗಳು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಸೀದಿ ಸರ್ವೆಗೆ ಆದೇಶ ನೀಡುವಂತೆ ವಿ ಹೆಚ್ ಪಿ ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ನವೆಂಬರ್ 9ರಂದು ಆದೇಶ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.
ಮಳಲಿ ಮಸೀದಿ ಹಿಂದೂ ದೇವಾಲಯ ಆಕೃತಿಯ ಕಟ್ಟಡವಿದೆ. ಮಸೀದಿ ಸಮುಚ್ಚಯ ಸರ್ವೆಗೆ ಆದೇಶ ಕೊಡಬೇಕು ಎಂದು ಹಿಂದೂ ಪರ ಸಂಘಟನೆಗಳು ಮನವಿ ಮಾಡಿದವು. ಆದರೆ ಮಸೀದಿ ಆಡಳಿತ ಮಂಡಳಿ ಹಾಗೂ ಮುಸ್ಲಿಂ ಸಂಘಟನೆಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.
ಮಸೀದಿ ಜಾಗದಲ್ಲಿ ಕೋರ್ಟ್ ಕಮಿಷನ್ ಮೂಲಕ ಸರ್ವೆ ನಡೆಸಲು ಆದೇಶ ಕೊಡಬೇಕು ಎಂದು ವಿಹೆಚ್ ಪಿ ಮನವಿ ಮಾಡಿತ್ತು. ಇದಕ್ಕೆ ಆಕ್ಷೇಪ ಸಲ್ಲಿಸಿದ್ದ ಮಸೀದಿ ಮಂಡಳಿ ಇಂತಹ ಆದೇಶ ನೀಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರ ಇರುವುದಿಲ್ಲ ವಿಹೆಚ್ ಪಿ ಅರ್ಜಿ ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಇದೀಗ ನವೆಂಬರ್ 9ರಂದು ತೀರ್ಪು ಕಾಯ್ದಿರಿಸಿದೆ.
ಮಹಿಳೆಯ ಮೇಲೆಯೇ ಹರಿದ KSRTC ಬಸ್
https://pragati.taskdun.com/latest/ksrtc-busbikeaccidentwoman-injured/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ