
ಪ್ರಗತಿವಾಹಿನಿ ಸುದ್ದಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಶುರುವಾಗಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರುನೂರು ಗ್ರಾಮದ ಶಾಲೆಗೆ ನದಿ ನೀರು ನುಗ್ಗಿದೆ.
ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವದರಿಂದ ರಾಮದುರ್ಗ ಪಟ್ಟಣದ ಬಾಣಕಾರ ಪೇಟೆ ಮತ್ತು ನಿಂಗಾಪೂರ ಪೇಟೆಯ ಹಲವು ಮನೆಗಳಿಗೂ ನೀರು ನುಗ್ಗಿದೆ. ಇನ್ನೂ ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯ ನೀರಿಗೆ ಮುನವಳ್ಳಿ ಹಳೆ ಸೇತುವೆ ಜಾಲವೃತವಾಗಿದೆ. ಇದರಿಂದ ಮುನವಳ್ಳಿ ಸವದತ್ತಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತವಾಗಿ 15 ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ