Belagavi NewsBelgaum NewsElection NewsKannada NewsKarnataka NewsNationalPolitics

*ಮಲಪ್ರಭಾ ಸಕ್ಕರೆ ಕಾರ್ಖಾನೆಯ ಚುನಾವಣೆ: ಪ್ರಚಾರ ನಡೆಸಿದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಇಂದು ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪ್ಯಾನಲ್ ನ ಸರ್ವ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ, ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ನ್ನು ಬೆಂಬಲಿಸುವಂತೆ ಕಾರ್ಖಾನೆಯ ಕಾರ್ಮಿಕರಲ್ಲಿ ವಿನಂತಿಸಿದರು.

ಈ ಕಾರ್ಖಾನೆಯ ಒಳಿತಿಗಾಗಿ, ಗತ ವೈಭವ ಮರಳಿ ತರಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಕಾರ್ಖಾನೆಯ ಏಳಿಗೆಗಾಗಿ ಶ್ರಮಿಸುತ್ತೇವೆ. ಬರುವ ದಿನಗಳಲ್ಲಿ ರೈತರ ಆಸೆಯಂತೆ ಕಾರ್ಖಾನೆಯ ಸಾಮಾರ್ಥ್ಯವನ್ನು  ಹೆಚ್ಚಿಸಲಾಗುವುದು.  ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಅವರು ವಿನಂತಿಸಿದರು.

ಈ ವೇಳೆ ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ, ಪ್ಯಾನಲ್ ನ ಸಾಮಾನ್ಯ ಮತಕ್ಷೇತ್ರದ ಇಟಗಿ ಶ್ರೀಕಾಂತ ನಾಗಪ್ಪ, ಕಿಲ್ಲೇದಾರ ಶಂಕರ್ ಪರಪ್ಪಾ, ತುರಮರಿ ಶ್ರೀಶೈಲ್ ಬಸಪ್ಪ, ಪಾಟೀಲ ರಘು ಚಂದ್ರಶೇಖರ್, ಪಾಟೀಲ ರಾಮನಗೌಡ ಸಣಗೌಡ, ಪಾಟೀಲ ಶಿವನಗೌಡ ದೊಡಗೌಡ, ಮರಡಿ ಶಿವಪುತ್ರಪ್ಪ ಬಸವಣ್ಣೆಪ್ಪ, ಮಹಿಳಾ ಮೀಸಲು ಕ್ಷೇತ್ರದ ಲಲಿತಾ ಬಾಲಚಂದ್ರ ಪಾಟೀಲ, ಲಂಗೂಟಿ ಸುನಿತಾ ಮಹಾಂತೇಶ್, ಅ ವರ್ಗದ ಫಕೀರಪ್ಪ ಫಕೀರಪ್ಪ ಸಕ್ರೆಣ್ಣವರ್, ಬ ವರ್ಗದ ಹೊಳಿ ಶಂಕರೆಪ್ಪ ಸದೆಪ್ಪ, ಪರಿಶಿಷ್ಟ ಜಾತಿ ವರ್ಗದ ಬಾಳಪ್ಪ ದುರಗಪ್ಪ ಪೂಜಾರ ಹಾಗೂ ಪರಿಶಿಷ್ಟ ಪಂಗಡ ವರ್ಗದ ಭರಮಪ್ಪ ಕಲ್ಲಪ್ಪ ಶಿಗೇಹಳ್ಳಿ ಉಪಸ್ಥಿತರಿದ್ದರು.

Home add -Advt

Related Articles

Back to top button