Film & Entertainment

*ಖ್ಯಾತ ನಟ, ರಾಜಕಾರಣಿ ಮುಕೇಶ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಜಸ್ಟಿಸ್ ಹೇಮಾ ವರದಿ ಕೇರಳ ಸಿನಿರಂಗದ ಹಾಗೂ ರಾಜಕಾರಣಿಗಳ ಕರಾಳ ಮುಖಗಳನ್ನು ಬಯಲು ಮಾಡಿದೆ. ಇದೀಗ ಇದರ ಮುಂದುವರಿದ ಭಾಗವಾಗಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ, ರಾಜಕಾರಣಿ ಮುಕೇಶ್ ರನ್ನು ಬಂಧಿಸಲಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಕೇಶ್ ಅವರನ್ನು ವಶಕ್ಕೆ ಪಡೆದಿದ್ದ ಕೊಚ್ಚಿಯ ಕೋಸ್ಟಲ್ ಪೊಲೀಸರು ವಿಚಾರಣೆ ಬಳಿಕ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೈಕೋರ್ಟ್ ನಿಂದ ನಿರೀಕ್ಷಣ ಅಜಾಮೀನು ಪಡೆದಿದ್ದ ಮುಕೇಶ್ ಬಂಧನ ಚರ್ಚೆಗೆ ಕಾರಣವಾಗಿದೆ.

Home add -Advt

ಖ್ಯಾತ ನಟ, ರಾಜಕಾರಣಿ ಮುಕೇಶ್ ಬಂಧನವಾಗುತ್ತಿದ್ದಂತೆ ಇಂತಹ ಪ್ರಕರಣದ ಆರೋಪ ಎದುರಿಸುತ್ತಿರುವ ಇತರರಿಗೂ ಆತಂಕ ಶುರುವಾಗಿದೆ.

Related Articles

Back to top button