Latest

*ಮಾಲ್ಟ್ ಮಿಶ್ರಿತ ಹಾಲು ಸೇವಿಸಿದ 19 ವಿದ್ಯಾರ್ಥಿಗಳು ಅಸ್ವಸ್ಥ: ತುರಿಕೆ, ಗುಳ್ಳೆಗಳಿಂದ ಬಳಲುತ್ತಿರುವ ಮಕ್ಕಳು*

ಪ್ರಗತಿವಾಹಿನಿ ಸುದ್ದಿ: ಮಾಲ್ಟ್ ಮಿಶ್ರಿತ ಹಾಲು ಸೇವಿಸಿದ್ದ 19 ವಿದ್ಯಾರ್ಥಿಗಳು ಅಲರ್ಜಿ, ತುರಿಕೆಯಿಂದ ಬಳಲುತ್ತಿರುವ ಘಟನೆ ಕೋಲಾರದ ಸರ್ಕಾರಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಂಗೊಂಡಳ್ಳಿಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳಿಗೆ ಮಾಲ್ಟ್ ಮಿಶ್ರಿತ ಹಾಲು ಕೊಡಲಾಗಿತ್ತು. ಹಾಲು ಸೇವಿಸಿದ್ದ 19 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ.

ಮಾಲ್ಟ್ ಹಾಲು ಸೇವಿಸಿರುವ ವಿದ್ಯಾರ್ಥಿಗಳಲ್ಲಿ ಮೈತುರಿಕೆ, ದೇಹದ ಮೇಲೆ ಗುಳ್ಳೆಗಳು, ಅಲರ್ಜಿಯಂತಹ ಲಕ್ಷಣ ಕಂಡುಬಂದಿದೆ. ಅಸ್ವಸ್ಥಗೊಂಡಿರುವ 18 ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವಿದ್ಯಾರ್ಥಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button