ಪ್ರಗತಿವಾಹಿನಿ ಸುದ್ದಿ, ಕ್ಯಾಲಿಫೋರ್ನಿಯಾ: ಸೀರೆ ಮತ್ತು ಬಿಂದಿ ಧರಿಸಿದ್ದ 14 ಮಹಿಳೆಯರ ಮೇಲೆ ವಿಕೃತ ವ್ಯಕ್ತಿಯೊಬ್ಬ ದಾಳಿ ಮಾಡಿ ಅವರ ಆಭರಣಗಳನ್ನು ಹರಿದು ಹಾಕಿದ್ದಾನೆ.
ವರ್ಷದ ಲಥನ್ ಜಾನ್ಸನ್ (37) ಎಂಬ ವ್ಯಕ್ತಿ ಈ ಕೃತ್ಯವೆಸಗಿದವ. ಈತನ ವಿರುದ್ಧ ದ್ವೇಷದ ಅಪರಾಧಗಳು ಮತ್ತು ದರೋಡೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ದಕ್ಷಿಣ ಏಷ್ಯಾದ ಮಹಿಳೆಯರ ಮೇಲೆ ದಾಳಿ ಮಾಡಿದ ಲಥನ್ ಅವರ ಕುತ್ತಿಗೆಯಿಂದ 35,000 ಡಾಲರ್ ಮೌಲ್ಯದ ನೆಕ್ಲೇಸ್ ಗಳನ್ನು ಕಿತ್ತೆಸೆದಿದ್ದಾನೆ ಎಂದು ಜಿಲ್ಲಾ ವಕೀಲರ ಕಚೇರಿ ತಿಳಿಸಿದೆ.
50-73 ವರ್ಷ ವಯಸ್ಸಿನ, ಸೀರೆ, ಬಿಂದಿ ಮತ್ತು ಇತರ ಜನಾಂಗೀಯ ಉಡುಪುಗಳನ್ನು ಧರಿಸಿದ್ದ ಮಹಿಳೆಯರ ಮೇಲೆ ಈತ ದಾಳಿ ನಡೆಸಿದ್ದಾಗಿ ಹೇಳಲಾಗಿದೆ.
ಚೆನ್ನೈನಲ್ಲಿ ಬೀದಿ ವ್ಯಾಪಾರಿಯಿಂದ ತರಕಾರಿ ಖರೀದಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ