
ಪ್ರಗತಿ ವಾಹಿನಿ ಸುದ್ದಿ; ಲುಧಿಯಾನ: ಬ್ಯಾಂಕ್ ಸಿಬ್ಬಂದಿಯ ಅಚಾತುರ್ಯದಿಂದಾಗಿ ಹಣ ಡೆಪಾಸಿಟ್ ಮಾಡಲು ಬಂದಿದ್ದ ವ್ಯಕ್ತಿ ಮತ್ತು ಆತನ 5 ವರ್ಷದ ಮಗ ಬ್ಯಾಂಕಿನೊಳಗೇ ಬಂಧಿಯಾದ ಘಟನೆ ಲುಧಿಯಾನದಲ್ಲಿ ನಡೆದಿದೆ.
ಬ್ಯಾಂಕ್ ಕೆಲಸದ ಅವಧಿ ಮುಗಿಯುವ ವೇಳೆಗೆ ಹಣ ಡೆಪಾಸಿಟ್ ಮಾಡಲು ತಂದೆ ಮಗ ಬಂದಿದ್ದರು. ಕೆಲಸ ಮುಗಿದು ಇನ್ನೇನು ಹೊರಬರಬೇಕು ಎನ್ನುವಷ್ಟರಲ್ಲಿ ಬ್ಯಾಂಕ್ ಸಿಬ್ಬಂದಿ ಶಟರ್ ಎಳೆದಿದ್ದಾರೆ. ಈ ವೇಳೆ ವ್ಯಕ್ತಿ ನಿಲ್ಲಿ ಎಂದು ಕಿರುಚಿಕೊಂಡಿದ್ದಾರೆ. ಆದರೆ ವ್ಯಕ್ತಿಯ ಕೂಗಾಟವನ್ನು ಕೇಳದ ಬ್ಯಾಂಕಿನವರು ಶಟರ್ ಬಂದ್ ಮಾಡಿ ಹೊರಟುಹೋಗಿದ್ದಾರೆ. ‘
ಇತ್ತ ಬಂಧಿಯಾಗಿದ್ದ ವ್ಯಕ್ತಿ ಗರಬಡಿದಂತಾಗಿದ್ದರು. ಆತಂಕದ ಸ್ಥಿತಿಯಿಂದ ಹೊರಬಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಪೊಲೀಸರು ಬ್ಯಾಂಕ್‌ನವರನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಂತೂ ಮೂರು ತಾಸುಗಳ ಬಳಿಕ ಬ್ಯಾಂಕ್‌ನವರು ಪೊಲೀಸರಿಗೆ ಸಿಕ್ಕಿದ್ದು ಬೀಗ ತೆಗೆದು ಬಂಧಿಯಾಗಿದ್ದ ತಂದೆ ಮಗನನ್ನು ಹೊರ ಬಿಡಲಾಯಿತು.
ಆಕಸ್ಮಿಕವಾಗಿ ಸಿಕ್ಕು ಬಿದ್ದಿದ್ದ ವ್ಯಕ್ತಿ ಮತ್ತು ಅವರ ಮಗ ಸುರಕ್ಷಿತವಾಗಿದ್ದಾರೆ. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮನೆಗೆ ಕಳುಹಿಸಿಕೊಡಲಾಗಿದೆ. ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಸಿಬ್ಬಂದಿಯ ನೇಮಕ ಮಾಡಿಕೊಳ್ಳದಿರುವುದು ಈ ಅಚಾತುರ್ಯಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಲುಧಿಯಾನ ಪೊಲೀಸರು ತಿಳಿಸಿದ್ದಾರೆ.
ತಿರುಪತಿಯಲ್ಲಿ ಭೂಕಂಪ; ಯಾತ್ರಾಸ್ಥಳದಲ್ಲಿ ಆತಂಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ