Latest

ಟ್ಯಾಟೂದಲ್ಲೂ ಗಿನ್ನಿಸ್ ದಾಖಲೆ !

ಮೈ ತುಂಬ ಕೀಟಗಳ ಹಚ್ಚೆ

ನ್ಯೂಯಾರ್ಕ್ – ಜನ ದಾಖಲೆಗಾಗಿ ಏನೇನೆಲ್ಲ ಮಾಡುತ್ತಾರೆ, ಕೆಲವೊಂದು ಸಾಹಸದ ಕ್ರಿಯೆಯಾಗಿ ಮೈ ಜುಂ ಎನಿಸಿದರೆ ಇನ್ನು ಕೆಲವು ವಿಕ್ಷಿಪ್ತವಾಗಿರುತ್ತವೆ. ಇಲ್ಲೊಬ್ಬ ಮೈ ಮೇಲೆ ಹಚ್ಚೆ (ಟ್ಯಾಟು) ಹಾಕಿಸಿಕೊಳ್ಳುವುದರಲ್ಲೂ ಗಿನ್ನಿಸ್ ದಾಖಲೆ ಬರದಿದ್ದಾನೆ !

ಹೌದು, ಅಮೇರಿಕಾದ ಮೈಕ್ ಅಮೋಯಾ ಎಂಬ ಈ ವ್ಯಕ್ತಿ ಮೈಮೇಲೆ ವಿವಿಧ ಬಗೆಯ ಕೀಟಗಳ ಒಟ್ಟು ೮೬೪ ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾನೆ. ಇನ್ನು ಈ ವ್ಯಕ್ತಿಯ ಮೈಮೇಲಿನ ಹಚ್ಚೆಗಳಲ್ಲಿ ಕೇವಲ ಕೀಟಗಳ ಲೆಕ್ಕ ಮಾತ್ರ ಮಾಡಲಾಗಿದೆಯಂತೆ. ಅದನ್ನು ಹೊರತುಪಡಿಸಿಯೂ ಇತರ ಚಿತ್ರಗಳ ಟ್ಯಾಟೂ ಪ್ರತ್ಯೇಕವಿದೆಯಂತೆ. ಎಲ್ಲವೂ ಸೇರಿದರೆ ಟ್ಯಾಟೂ ಲೆಕ್ಕ ಸಾವಿರ ದಾಟಬಹುದು.

Home add -Advt

ಮಕ್ಕಳ ಸಹಾಯಕ್ಕಾಗಿ

ಇನ್ನು ಮೈಮೇಲೆ ಇಷ್ಟೆಲ್ಲ ಬಗೆಯ ಕೀಟಗಳ ಹಚ್ಚೆ ಹಾಕಿಸಿಕೊಂಡಿದ್ದರೂ ಮೈಕ್‌ಗೆ ಕೀಟಗಳನ್ನು ಕಂಡರೆ ಆಗದು ಎಂದು ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾನೆ. ವಾಸ್ತವದಲ್ಲಿ ನನಗೆ ಕೀಟಗಳನ್ನು ಕಂಡರೆ ಆಗದು. ಆದರೆ ಅನಾಥ ಮಕ್ಕಳ ಮಕ್ಕಳ ಸಹಾಯಾರ್ಥವಾಗಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಈ ದಾಖಲೆಯಿಂದ ಬಂದ ಹಣವನ್ನು ಅನಾಥ ಮಕ್ಕಳ ಸಹಾಯಾರ್ಥವಾಗಿ ಬಳಸುತ್ತೇನೆ ಎಂದಿದ್ದಾನೆ.

ವಿವಾದದ ಸುಳಿಯಲ್ಲಿ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ; ಅದೇನು ವಿವಾದ? ಈ ಸುದ್ದಿ ಓದಿ

Related Articles

Back to top button