ಪ್ರಗತಿ ವಾಹಿನಿ ಸುದ್ದಿ, ಜೈಪುರ: ಲಿಪ್ಟಿನ ಬಾಗಿಲು ತೆರೆದರೂ ಲಿಫ್ಟ್ ಮೇಲೆ ಬಾರದ ಕಾರಣ 11 ನೇ ಮಹಡಿಯಿಂದ ಬಿದ್ದು 20 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಯುವಕನ ಮನೆ ಅಪಾರ್ಟ್ ಮೆಂಟ್ ಒಂದರ 11 ನೇ ಮಹಡಿಯಲ್ಲಿದೆ. ಆತ ಎಂದಿನಂತೆ ಲಿಫ್ಟ್ ಗುಂಡಿ ಒತ್ತಿದ. ಲಿಫ್ಟ್ ನ ಬಾಗಿಲು ತೆರೆದಿದೆ. ಆದರೆ ತಾಂತ್ರಿಕ ದೋಷದಿಂದ ಲಿಫ್ಟ್ ನ ಕಾರ್ ಮಾತ್ರ ಬಂದಿರಲೇ ಇಲ್ಲ. ಇದನ್ನು ಅರಿಯದೇ ತೆರೆದ ಬಾಗಿಲಿನ ಮೂಲಕ ಹೋದ ಯುವಕ ಸೀದಾ 11 ನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಅಪರಿಚಿತ ವೃದ್ಧೆಯ ಶವ ಪತ್ತೆ; ವೃದ್ಧೆಯ ಪರಿಚಯ ಸಿಕ್ಕಲ್ಲಿ ಈ ನಂಬರಿಗೆ ಸಂಪರ್ಕಿಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ