Latest

ಮಕ್ಕಳು ಸೇರಿ ಐವರ ಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮಕ್ಕಳು ಸೇರಿ ಐವರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯೇ ಮಕ್ಕಳನ್ನು ಹತ್ಯೆ ಮಾಡಿದ್ದಳು ಎಂಬ ಆಘಾತಕಾರಿ ಅಂಶ ಇದೀಗ ಬಯಲಾಗಿದೆ.

ಹಂತಕಿ ಲಕ್ಷ್ಮಿಯನ್ನು ಮಂಡ್ಯದ ಕೆ.ಆರ್.ಎಸ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ಫೆ.6ರಂದು 26 ವರ್ಷದ ಲಕ್ಷ್ಮಿ, 12 ವರ್ಷದ ರಾಜ್, 7 ವರ್ಷದ ಕೋಮಲ್, 4 ವರ್ಷದ ಕುನಾಲ್, 8 ವರ್ಷದ ಗೋವಿಂದ ಕೊಲೆಯಾದವರು.

ಹಂತಕಿ ಲಕ್ಷ್ಮಿಗೆ ಕೊಲೆಯಾದ ಮಹಿಳೆ ಲಕ್ಷ್ಮಿಯ ಪತಿ ಗಂಗಾರಾಮ್ ಮೇಲೆ ಕಣ್ಣಿತ್ತು. ತನ್ನನ್ನಿ ಮದುವೆಯಾಗುವಂತೆ ಪೀಡಿಸುತ್ತಿದ್ದಳು. ತಾನು ಪ್ರೀತಿಸಿದ ವ್ಯಕ್ತಿಯನ್ನು ಪಡೆಯಲು ನಾಲ್ವರು ಮಕ್ಕಳನ್ನು ಹಾಗೂ ತನ್ನ ಪ್ರಿಯತಮನ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆಗೈದು ಅಮಾಯಕಿಯಂತೆ ಮೃತದೇಹಗಳ ಮುಂದೆ ಕಣ್ಣೀರಿಡುತ್ತಾ ಕುಳಿತಿದ್ದಳು.

ಆರೋಪಿ ಸುಳಿವು ಹಚ್ಚುವುದೇ ಪೊಲೀಸರಿಗೊಂದು ತಲೆನೋವಾಗಿತ್ತು. ಆದರೆ ಗಂಗಾರಾಮ್ ಮೇಲೆ ಮಹಿಳೆಯೊಬ್ಬಳಿಗೆ ಪ್ರೀತಿ ಇತ್ತು ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಹಂತಕಿ ಲಕ್ಷ್ಮಿಯನ್ನು ಪೊಲಿಸರು ಬಂಧಿಸಿದ್ದಾರೆ.

ಆರೋಪಿ ಲಕ್ಷ್ಮೀ ಡಿಸೆಂಬರ್‌ನಿಂದಲೇ ಕೊಲೆ‌ ಮಾಡಲು ಸಂಚು ರೂಪಿಸಿದ್ದಳು.ಮಚ್ಚು ಖರೀದಿ ಮಾಡಿ ಕೊಲೆಯಾದ ಲಕ್ಷ್ಮಿ‌ ಮನೆಯ ಬಾತ್‌ರೂಂನಲ್ಲೇ ಬಚ್ಚಿಟ್ಟಿದ್ದಳು. ಗಂಗಾರಾಮ್ ವ್ಯಾಪಾರಕ್ಕೆ ಹೋದ ನಂತರ ಮನೆಗೆ ಬಂದಿದ್ದ ಆರೋಪಿ ಲಕ್ಷ್ಮೀ, ಕೊಲೆಯಾದ ಲಕ್ಷ್ಮಿ ಮನೆಯಲ್ಲಿ ಉಳಿದುಕೊಂಡಿದ್ದಳು. ರಾತ್ರಿ ಎಲ್ಲರೂ ಮಲಗಿದ ಬಳಿಕ ಬಚ್ಚಲು ಮನೆಯಿಂದ ಮಚ್ಚು ತಂದಿದ್ದಾಳೆ. ಲಕ್ಷ್ಮೀ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಶಬ್ಧ ಕೇಳಿ ಎಚ್ಚೆತ್ತ ಗೋವಿಂದನ‌ ಮೇಲೂ ಹಲ್ಲೆ ಮಾಡಿ ಬಳಿಕ ಮೂರು ಮಕ್ಕಳ ಮೇಲೂ ಮಚ್ಚು ಬೀಸಿ ಕೊಲೆ ಮಾಡಿದ್ದಾಳೆ. ಹತ್ಯೆ ನಂತರ ಮುಂಜಾನೆವರೆಗೂ ಅಲ್ಲೇ ಇದ್ದು ಬೆಳಗಿನ ಜಾವ ಮೈಸೂರಿನ ಮನೆಗೆ ವಾಪಾಸ್ ಆಗಿದ್ದಾಳೆ. ಬಳಿಕ ರಕ್ತದ ಬಟ್ಟೆಯನ್ನು ವರುಣ ನಾಲೆಗೆ ಎಸೆದಿದ್ದಾಳೆ. ಬಳಿಕ ಬೆಳಿಗ್ಗೆ ಹತ್ಯೆ ನಡೆದ ಸ್ಥಳಕ್ಕೆ ಬಂದು ಎಲ್ಲರ ಜೊತೆ ಸೇರಿ ಅಳುವ ನಾಟಕವಾಡಿದ್ದಾಳೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button