
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರದ ಮಾಜಿ ಸಚಿವ ಸುರೇಶ ಅಂಗಡಿ ಜನ್ಮದಿನದ ನಿಮಿತ್ತ ಅವರ ಪತ್ನಿ, ಸಂಸದೇ ಮಂಗಲಾ ಅಂಗಡಿ ಬೆಳಗಾವಿಯ ವಿಶ್ವಹಿಂದೂ ಪರಿಷತ್ ನಡೆಸುತ್ತಿರುವ ಕೋವಿಡ್ ಸೆಂಟರ್ ಗೆ ತೆರಳಿ ಆರ್ಥಿಕ ನೆರವು ನೀಡಿದರು.
ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಜೊತೆ ತೆರಳಿದ ಮಂಗಲಾ ಅಂಗಡಿ ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಅವರಿಗೆ ತಮ್ಮ ಕಾಣಿಕೆಯನ್ನು ಹಸ್ತಾಂತರಿಸಿದರು.
ವಿಜಯ ಜಾಧವ ಹಾಗೂ ವಿಶ್ವಹಿಂದೂ ಪರಿಷತ್ತಿನ ಅನೇಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ