Latest

ಸ್ಯಾನಿಟರಿ ಪ್ಯಾಡ್ ನಲ್ಲಿ ಚಿನ್ನವಿಟ್ಟು ಅಕ್ರಮ ಸಾಗಾಟ; ಮಹಿಳೆ ಬಂಧನ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಸ್ಯಾನಿಟರಿ ಪ್ಯಾಡ್ ಹಾಗೂ ಒಳ ಉಡುಪಿನಲ್ಲಿ ಚಿನ್ನ ಇಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ 2.41 ಕೆಜಿ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ದುಬೈನಿಂದ ಆಗಮಿಸಿದ್ದ ಮಹಿಳೆಯೊಬ್ಬರು ಸ್ಯಾನಿಟರಿ ಪ್ಯಾಡ್ ನಲ್ಲಿ ಚಿನ್ನವಿಟ್ಟು ಸಾಗಾಟ ಮಾಡಲು ಯತ್ನಿಸಿದ್ದರು. ಕಸ್ಟಮ್ಸ್ ಅಧಿಕಾರಿಗಳ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದು, ಮಹಮ್ಮದ್ ಆಲಿ ಸಮೀರಾ ಎಂಬುವವರನ್ನು ವಶಕ್ಕೆ ಪಡೆದು, ಚಿನ್ನವನ್ನು ಜಪ್ತಿ ಮಾಡಲಾಗಿದೆ.

Home add -Advt

ಜಪ್ತಿ ಮಾಡಿರುವ ಚಿನ್ನದ ಮೌಲ್ಯ 1.10 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಮಹಿಳೆಯಿಂದ ವಿದೇಶಿ ಸಿಗರೇಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.

 

Related Articles

Back to top button