Latest

ಮಂಗಳೂರು ಸ್ಫೋಟ ಪ್ರಕರಣ; ನಕಲಿ ಆಧಾರ್ ಕಾರ್ಡ್ ನ ಅಸಲಿ ವ್ಯಕ್ತಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಮಂಗಳೂರು ಆಟೋ ಸ್ಫೋಟ ಪ್ರಕರಣದ ಆರೋಪಿ ಬಳಿ ಇದ್ದ ನಕಲಿ ಆಧಾರ್ ಕಾರ್ಡ್ ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆಯಾಗಿದ್ದಾರೆ.

ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಸ್ಫೋಟಿಸಿರುವ ವ್ಯಕ್ತಿ ಬಳಿ ಇದ್ದ ಪ್ರೇಮ್ ರಾಜ್ ಹೆಸರಿನ ಆಧಾರ್ ಕಾರ್ಡ್ ನಕಲಿ ಎಂಬುದು ತಿಳಿದುಬಂದ ಬೆನ್ನಲ್ಲೇ ಅಸಲಿ ಪ್ರೇಮ್ ರಾಜ್ ಯಾರು ಎಂಬ ಬಗ್ಗೆ ಮಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ತುಮಕೂರಿನಲ್ಲಿ ಅಸಲಿ ವ್ಯಕ್ತಿ ಪತ್ತೆ ಮಾಡಿದ್ದಾರೆ.

ಹುಬ್ಬಳ್ಳಿ ಮೂಲದ ಪ್ರೇಮ್ ರಾಜ್ ಹುಟಗಿ ತುಮಕೂರಿನಲ್ಲಿ ರೈಲ್ವೆ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸ ಮಾಡುತ್ತಿದ್ದು, ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಪ್ರೇಮ್ ರಾಜ್ ಕಳೆದ ಎರಡು ವರ್ಷದಲ್ಲಿ ಎರಡುಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರಂತೆ.

ಒಮ್ಮೆ ಧಾರವಾಡದಿಂದ ಬೆಳಗಾವಿಗೆ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಹಾಗೂ ಮತ್ತೊಮ್ಮೆ ಹುಬ್ಬಳ್ಳಿಯಿಂದ ತುಮಕೂರಿಗೆ ಹೋಗುತ್ತಿದ್ದ ವೇಳೆ ಬಸ್ ನಲ್ಲಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರಂತೆ. ಇದೀಗ ಅವರ ಆಧಾರ್ ಕಾರ್ಡ್ ಶಂಕಿತ ಉಗ್ರನೊಬ್ಬ ಉಪಯೋಗಿಸಿರುವುದು ಬೆಳಕಿಗೆ ಬಂದಿದ್ದು ಆಘಾತವಾಗಿದೆ ಎಂದು ತಿಳಿಸಿದ್ದಾರೆ. ಶನಿವಾರ ರಾತ್ರಿ ಎಡಿಜಿಪಿ ಅಲೋಕ್ ಕುಮಾರ್ ಕರೆ ಮಾಡಿ ತುಮಕೂರು ಎಸ್ ಪಿ ಭೇಟಿಯಾಗಲು ಸೂಚಿಸಿದ್ದರು. ಅದರಂತೆ ಅವರನ್ನು ಸಂಪರ್ಕಿಸಿದಾಗ ನನ್ನ ಹೆಸರು ಈ ರೀತಿ ದುರ್ಬಳಕೆಯಾಗಿರುವುದು ಗೊತ್ತಾಗಿದೆ. ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳಿಗೆ ಸಿಕ್ಕ ಆಧಾರ್ ಕಾರ್ಡ್ ನಲ್ಲಿ ನನ್ನ ಹೆಸರು ವಿಳಾಸವಿದೆ. ಆದರೆ ಫೋಟೊ ನನ್ನದಲ್ಲ. ನನಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಆಟೋ ಸ್ಫೋಟ ಪ್ರಕರಣದಲ್ಲಿ ಉಗ್ರರ ಕರಿ ನೆರಳು; ಶಂಕಿತನ ಗುರುತು ಪತ್ತೆ

https://pragati.taskdun.com/mangaloreauto-blast-casesuspectedfound/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button