Latest

ಆಟೋ ಸ್ಫೋಟ ಪ್ರಕರಣದಲ್ಲಿ ಉಗ್ರರ ಕರಿ ನೆರಳು; ಶಂಕಿತನ ಗುರುತು ಪತ್ತೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣದ ಹಿಂದೆ ಉಗ್ರರ ಕೈವಾಡವಿರಿವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆಟೋ ಸ್ಫೋಟ ಪ್ರಕರಣದ ಶಂಕಿತನ ಗುರುತು ಪತ್ತೆಯಾಗಿದ್ದು, ಈತ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ನಕಲಿ ವಿಳಾಶಕಿಒಟ್ಟು ವಾಸವಾಗಿದ್ದ ಎಂಬುದು ಬಯಲಾಗಿದೆ.

ಈಗಾಗಲೇ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಬಳಿ ಹಿಂದೂ ವ್ಯಕ್ತಿ ಹೆಸರಲ್ಲಿನ ನಕಲಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿದೆ. ಶಂಕಿತ ವ್ಯಕ್ತಿ ಮೈಸೂರಿನ ಲೋಕನಾಯಕ ನಗರದ 10ನೇ ಕ್ರಾಸ್ ನಲ್ಲಿ ಮೋಹನ್ ಕುಮಾರ್ ಎಂಬುವವರ ಮನೆಯಲ್ಲಿ ಸಿಂಗಲ್ ರೂಮ್ ನಲ್ಲಿ ಬಾಡಿಗೆಗೆ ಇದ್ದ.

ಆತ ಮನೆ ಅಗ್ರಿಮೆಂಟ್ ನಲ್ಲಿ ಪ್ರೇಮ್ ಕುಮಾರ್ ಎಂದು ತನ್ನ ಹೆಸರು ಉಲ್ಲೇಖ ಮಾಡಿದ್ದು, ಹುಬ್ಬಳ್ಳಿಯ ವಿಳಾಸ ನೀಡಿದ್ದ. ಆತ ನೀಡಿರುವ ವಿಳಾಸವೂ ನಕಲಿಯಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

Home add -Advt

ಆಟೋದಲ್ಲಿ ನಿಗೂಢ ಸ್ಫೋಟ; ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

https://pragati.taskdun.com/mangaloreauto-blastaccused-arrest/

Related Articles

Back to top button