ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಮತಾಂತರ ಯತ್ನವೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ನಾಗೇಶ್, ಪತ್ನಿ ವಿಜಯಲಕ್ಷ್ಮಿ ಹಾಗೂ ಇಬ್ಬರು ಮಕ್ಕಳ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರಕ್ಕೆ ಒತ್ತಾಯಿಸಿದ್ದು ಕಾರಣ ಎಂದು ತಿಳಿದುಬಂದಿದೆ.
ಆರೋಪಿ ನೂರ್ ಜಹಾನ್ ಎಂಬ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಡೆತ್ ನೋಟ್ ನಲ್ಲಿ ನಾಗೇಶ್ ಬರೆದಿಟ್ಟ ವಿಷಯ ಸತ್ಯ ಎಂಬುದು ಬಯಲಾಗಿದೆ.
ಮದುವೆ ಬ್ರೋಕರ್ ಆಗಿದ್ದ ನೂರ್ ಜಹಾನ್ ಎಂಬ ಮಹಿಳೆ ಮನೆಯಲ್ಲಿ ವಿಜಯಲಕ್ಷ್ಮಿ ಕೆಲಸ ಮಾಡುತ್ತಿದ್ದಳು. ವಿಜಯಲಕ್ಷ್ಮಿ ಹಾಗೂ ಆಕೆ ಪತಿ ನಾಗೇಶ್ ನಡುವಿನ ಜಗಳ, ಮನಸ್ತಾಪವನ್ನು ಬಂಡವಾಳ ಮಾಡಿಕೊಂಡು, ವಿಜಯಲಕ್ಷ್ಮಿಯನ್ನು ಮತಾಂತರಕ್ಕೆ ಯತ್ನಿಸಿದ್ದಳು. ಆಕೆಗೆ ವಿಚ್ಛೇದನ ಕೊಡಿಸಿ, ಮುಸ್ಲೀಂ ಹುಡುಗನ ಜೊತೆ ಮದುವೆ ಮಾಡಲು ಮುಂದಾಗಿ, ಹುಡುಗನಿಗಾಗಿ ಹುಡುಕಾಟ ನಡೆಸಿದ್ದಳು. ಈ ವಿಷಯದಿಂದ ಬೇಸತ್ತ ನಾಗೇಶ್, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣ ಸಂಬಂಧ ನೂರ್ ಜಹಾನ್ ಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಗುರುಗಳನ್ನು ನಿಂದಿಸಿದ್ದಕ್ಕೆ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ವಿದ್ಯಾರ್ಥಿ
ಬೆಳಗಾವಿ ಅಧಿವೇಶನ: 4000 ಪೊಲೀಸರ ನಿಯೋಜನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ