Belagavi NewsBelgaum News

*ಬೆಂಡಿಗೇರಿ: ದೇವಸ್ಥಾನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಮೃಣಾಲ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಂಡಿಗೇರಿ ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಸೋಮವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಇದೇ ಸಮಯದಲ್ಲಿ ಸುಮಾರು 25 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಸಿ.ಸಿ.ಪಾಟೀಲ, ಅಡಿವೇಶ ಇಟಗಿ, ಸುರೇಶ ಇಟಗಿ, ಪ್ರಕಾಶ ಜಪ್ತಿ, ಸಿದ್ದು ಹಾವಣ್ಣವರ್, ಪ್ರಕಾಶ ಪಾಟೀಲ, ರವಿ ಮೇಳೆದ್, ಸಂಗಪ್ಪ ಕುಡಚಿ, ಗೌಸ್ ಜಾಲಿಕೊಪ್ಪ, ಬಾಳಪ್ಪ ಮಾಡಲಗಿ, ಬಸವ್ವ ಚೌಹಾನ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿವಾನಂದ ಚಂಡು, ಭರಮಣ್ಣ ದೊಡಮನಿ, ಮುರಸಿದ್ಧ ಬಾಳೇಕುಂದ್ರಿ, ಪದ್ಮರಾಜ ಪಾಟೀಲ, ಮನೋಹರ್ ಬೆಳಗಾಂವ್ಕರ್, ಪುಂಡಲಿಕ್ ನನೋಜಿ, ದೇವಸ್ಥಾನ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Home add -Advt

Related Articles

Back to top button