Kannada NewsLatestWorld

*ಮಾರುಕಟ್ಟೆ ಬಳಿ ಮಿಲಿಟರಿ ದಾಳಿ: 49 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ರಖೈನ್ ರಾಜ್ಯದ ಕ್ಯೌಕ್ತಾವ್ ಟೌನ್‌ಶಿಪ್‌ನಲ್ಲಿರುವ ಮಾರುಕಟ್ಟೆಯ ಸಮೀಪ ಮ್ಯಾನ್ಮಾರ್ ಮಿಲಿಟರಿ ನಡೆಸಿದ ವಾಯುದಾಳಿಯಲ್ಲಿ 49 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸ್ಥಳೀಯ ಮಾರುಕಟ್ಟೆಯ ಬಳಿ ಫೈಟರ್ ಜೆಟ್ ಎರಡು ಬಾಂಬ್‌ಗಳನ್ನು ಸ್ಫೋಟಿಸಿದ್ದು, ಈ ದಾಳಿಯಲ್ಲಿ 49 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 58 ಜನರು ಗಾಯಗೊಂಡಿದ್ದಾರೆ.

ಗಾಯಗೊಂಡವರ ಪೈಕಿ 22 ಜನರ ಸ್ಥಿತಿ ಗಂಭೀರವಾಗಿದೆ ಎಂದು ರಖೈನ್‌ನ ಹಿರಿಯ ರಕ್ಷಣಾ ಅಧಿಕಾರಿಯಾದ ವಾಯ್ ಹುನ್ ಆಂಗ್ ಅವರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಮ್ಯಾನ್ಮಾರ್ ಮಿಲಿಟರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮಿಲಿಟರಿಯು ಉದ್ದೇಶಪೂರ್ವಕವಾಗಿ ವಾಯುದಾಳಿಗಳನ್ನು ನಡೆಸಿದೆ ಎಂದು ಅರಾಕನ್ ಆರ್ಮಿ ಆರೋಪಿಸಿದೆ.

ಇನ್ನೂ ಇಂದು (ಸೆ.29) ಮುಂಜಾನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಾಮೂಹಿಕ ಸಾವುನೋವುಗಳಿಗೆ ಕಾರಣರಾದ, ಉದ್ದೇಶಪೂರ್ವಕ ವಾಯುದಾಳಿಗಳಿಗೆ ನೇರವಾಗಿ ಕಾರಣರಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತಿಳಿಸಿದೆ.

ಮಾರುಕಟ್ಟೆಯು ಈ ಪ್ರದೇಶದ ಮುಖ್ಯ ಸಗಟು ಕೇಂದ್ರವಾಗಿದ್ದು, ರಖೈನ್ ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಮತ್ತು ಖರೀದಿದಾರರನ್ನು ಆಕರ್ಷಿಸುತ್ತದೆ. ಇದು ರಖೈನ್‌ನಲ್ಲಿ ನಡೆದ ಅತ್ಯಂತ ಗಂಭೀರ ವಾಯುದಾಳಿಗಳಲ್ಲಿ ಒಂದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button