Belagavi NewsBelgaum NewsCrimeKannada NewsKarnataka News
*ಮಾರಿಹಾಳ ಠಾಣೆ ಪೊಲೀಸ್‌ರಿಂದ ಮಟಕಾ ದಾಳಿ; ಇಬ್ಬರು ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರಿಹಾಳ ಗ್ರಾಮದ ಗುಡದಮ್ಮ ಗುಡಿಯ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಆಟ ಆಡುತ್ತಿದ್ದಾಗ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
2ನಿಂಗಪ್ಪ ಯಲ್ಲಪ್ಪ ನೇಸರಗಿ (40) ಹಾಗೂ ನಾಗೇಶ ಗುಡದಪ್ಪ ಬಕ್ಕೋಡಿ ಬಂಧಿತ ಆರೋಪಿ. ಮಾರಿಹಾಳ ಠಾಣೆಯ ಎಎಸ್‌ಐ ಆರ್. ಎಂ. ತಳವಾರ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ದಾಳಿ ಮಾಡಿ ಆರೋಪಿತನಿಂದ ಹಣ ಹಾಗೂ ಸಾಮಗ್ರಿಗಳನ್ನು ಜಪ್ತಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಟದಿಂದ ಬಂದ ಹಣವನ್ನು ಆರೋಪಿ ಇನ್ನೋರ್ವ ಆರೋಪಿ ನಾಗೇಶ ಗುಡದಪ್ಪ ಬಕ್ಕೋಡಿ ಎಂಬಾತನಿಗೆ ನೀಡುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ ಇಬ್ಬರೂ ಆರೋಪಿತರ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 37/2026 ಕಲಂ.78(iii) ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

