Belagavi NewsBelgaum NewsCrimeKannada NewsKarnataka NewsPolitics

*ಮಾರ್ಕೆಟ್ ಠಾಣೆ ಪೊಲೀಸರಿಂದ ಮಟಕಾ ಬುಕ್ಕಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾರ್ವಜನಿಕರ ಸ್ಥಳದಲ್ಲಿ ಸಂಖ್ಯೆಗಳ ಮೇಲೆ ಹಣ ಪಡೆದು ಮುಂಬೈ-ಮಟಕಾ ಆಟ ಆಡುತ್ತಿದ್ದಾಗ ಮಾರ್ಕೇಟ್ ಪೊಲೀಸ್ ಠಾಣೆಯ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಪ್ರಶಾಂತ ಭರಮಾ ಪಾಟೀಲ (29) ಹಾಗೂ ಪ್ರತೀಕ ಮೋಹನ ಜಾಧವ (35) ಬಂದಿತ ಆರೋಪಿಗಳು.‌ ಆರೋಪಿತರಿಂದ ಹಣ ಹಾಗೂ ಓಸಿ ಚೀಟಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Home add -Advt

ಆರೋಪಿಗಳು ಆಟದಿಂದ ಸಂಗ್ರಹಿಸಿದ ಹಣವನ್ನು ಇನ್ನೋರ್ವ ಆರೋಪಿ ಗಜಾನನ ಶಶಿಕಾಂತ ಗರಡ ಎಂಬಾತನಿಗೆ ನೀಡಿರುವುದು ಬೆಳಕಿಗೆ ಬಂದಿದೆ.

ಮೂವರೂ ಆರೋಪಿತರ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 89/2026, ಕಲಂಃ 78(3) ಕೆ. ಪಿ. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

Related Articles

Back to top button