Kannada NewsKarnataka News
ಸಮೃದ್ಧ ಭಾರತದ ಕನಸನ್ನು ನನಸು ಮಾಡುವ ಬಜೆಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರಸ್ತುತ ಕೇಂದ್ರ ಸರಕಾರದ ಬಜೆಟಿ ಸಮೃದ್ಧ ಭಾರತದ ಕನಸನ್ನು ನನಸು ಮಾಡುವ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಮಾರುಜಿ ಜಿರಲಿ ಅಭಿಪ್ರಾಯಪಟ್ಟಿದ್ದಾರೆ.
ನಿರ್ವಹಿಸು, ಸುಧಾರಿಸು, ಪರಿವರ್ತಿಸು ಎನ್ನುವ ಮಂತ್ರದ ಮೂಲಕ ಸುವರಣ ಭಾರತ ನಿರ್ಮಾಣಕ್ಕೆ ಕೇಂದ್ರ ಸರಕಾರ ದೃಢ ಹೆಜ್ಜೆ ಇಟ್ಟಿದೆ. ಈಗಾಗಲೆ ಹೆಜ್ಜೆ ಇಟ್ಟಿರುವ ಮೂಲಭೂತ ಸೌಕರ್ಯಗಳಾದ ಸಾರಿಗೆ, ಜಲ, ಔದ್ಯಮಿಕ ಯೋಜನೆಗಳಿಗೆ ಮತ್ತಷ್ಟು ಬಲತುಂಬಲು ಕೇಂದ್ರ ಸರಕಾರ ಕಟಿಬದ್ದವಾಗಿರುವುದರ ದ್ಯೋತಕವಾಗಿದೆ.
ಸಣ್ಣ ಉದ್ದಿಮೆದಾರರು, ಅಸಂಘಟಿತ ಕಾರ್ಮಿಕರು, ಲಘು ವ್ಯಾಪಾರಸ್ಥರು, ಕೃಷಿಕರಿಗೆ ಪಿಂಚಣಿ ಸಬ್ ಕಾ ವಿಕಾಸ್ ಕಾರ್ಯರೂಪವಾಗಿದೆ. ತಂತ್ರಜ್ಞಾನ ಅಭಿವೃದ್ಧಿ, ಆರ್ಥಿಕ ಸುಧಾರಣೆ, ವಯಕ್ತಿಕ ಮತ್ತು ಕಾರ್ಪೋರೇಟ್ ತೆರಿಗೆಗಳ ಸುಧಾರಣೆ ಭಾರತವನ್ನು ವಿಶ್ವಮಟ್ಟಕ್ಕೆ ಏರಿಸಲು ಅವಕಾಶ ಮಾಡಿಕೊಡುತ್ತದೆ. ಒಟ್ಟಾರೆ ಬಲಿಷ್ಠ ಆಧುನಿಕ ಭಾರತ ಕಟ್ಟು ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ.



