Kannada NewsKarnataka NewsLatest

ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ

 ಪ್ರಗತಿವಾಹಿನಿ ಸುದ್ದಿ, ಮುಗಳಖೋಡ:  ರಾಯಬಾಗ ತಾಲೂಕಿನಾದ್ಯಂತ ಮಹಾಮಾರಿ ಕೊರೊನಾ ತಾಂಡವವಾಡುತ್ತಿದ್ದರೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪಾದ್ರಿಗಳು ತಾಲೂಕಿನ ಜನರನ್ನು ಕೂಡಿಸಿ ಸಭೆ, ಸಾಮೂಹಿಕ ಪ್ರಾಥನೆ ನಡೆಸುತ್ತಿದ್ದರು.
ಮುಗಳಖೋಡ ಸಮೀಪದ ಖಣದಾಳ ಗ್ರಾಮದ ಚರ್ಚನಲ್ಲಿ ಸೋಮವಾರ ಬೆಳಿಗ್ಗೆ ೧೦:೩೦ ಗಂಟೆಗೆ ರಾಯಬಾಗ, ಅಳಗವಾಡಿ, ಬಸ್ತವಾಡ, ಹಂದಿಗುಂದ, ಇನ್ನೂ ಮುಂತಾದ ಗ್ರಾಮಗಳಿಂದ ಜನರನ್ನು ಕರೆಯಿಸಿ ಪಂಚಾಯತಿ ಅಥವಾ ಯಾವ ಅಧಿಕಾರಿಗಳ ಒಪ್ಪಿಗೆಯನ್ನು ಪಡೆಯದೆ ಗೌಪ್ಯತೆಯಿಂದ ಇಲ್ಲಿನ ಪಾಸ್ಟರಗಳು ಸಭೆ, ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದರು.

ವಿಷಯ ತಿಳಿದ ಗ್ರಾಮದ ಹಿರಿಯರು, ಗ್ರಾ.ಪಂ ಸದಸ್ಯರು, ಸ್ಥಳಕ್ಕೆ ದೌಡಾಯಿಸಿ, ರಾಯಬಾಗ ತಾಲೂಕಿನಲ್ಲಿ ಕೋವಿಡ್-೧೯ರ ಪ್ರಕರಣಗಳು ಹೆಚ್ಚುತ್ತಿವೆ ಇಂತಹ ಸಮಯದಲ್ಲಿ ಈ ಸಭೆಗಳು ಬೇಡ ಎಂದಾಗ ಪಾಸ್ಟರ್ ಮತ್ತು ಗ್ರಾಮರ ನಡುವೆ ವಾದ ವಿವಾದಗಳು ನಡೆದವು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ನೂರಕ್ಕೂ ಅಧಿಕ ಜನ ಮಾಸ್ಕ್ ಬಳಸದೆ ಸಭೆಯಲ್ಲಿ ಪಾಲ್ಗೊಂಡು ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಗ್ರಾಮಸ್ಥರು ಹಾಗೂ ಗ್ರಾ.ಪಂ ಸದಸ್ಯರು ಸ್ಥಳಕ್ಕೆ ತೆರಳಿ ಪೋಟೋ ತಗೆಯುವಾಗ ಸೇರಿದ ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಲು ಆರಂಭಿಸಿದರು. ಗ್ರಾ.ಪಂ ಪಿಡಿಓ ಸಂಜೀವ್ ನಂದಗಾಂವ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಮಾತನಾಡದೆ ಪೋನ್ ಕಡಿತಗೊಳಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಹಾರೂಗೇರಿ ಪೋಲಿಸ್ ಠಾಣೆಯ ಸಿಬ್ಬಂದಿ ಕೂಡಿದ ಜನರನ್ನು ಬೈದು ಮನೆಗಳಿಗೆ ಕಳುಹಿಸಿದರು.
ಗ್ರಾಮಸ್ಥರು ಹಾಗೂ ಗ್ರಾ.ಪಂ ಸದಸ್ಯರು ಇನ್ನೊಮ್ಮೆ ಇಂತಹ ಸಭೆಗಳನ್ನು ನಡೆಸಿರುವುದು ಕಂಡು ಬಂದರೆ ಚರ್ಚ್ ಬಂದ ಮಾಡುವದಾಗಿ ಪಾಸ್ಟರಗಳಿಗೆ ಪೊಲೀಸರು ಸೂಚಿಸಿದರು. ನಂತರ ಪೋಲಿಸರು ಜಾಗೃತಿಯ ಬಗ್ಗೆ ತಿಳಿಹೇಳಿ ಜನರನ್ನು ಮನೆಗೆ ಕಳುಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button