Belagavi NewsBelgaum NewsNational

*ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: 8 ಜನರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ : ಸೊಲ್ಲಾಪುರ ನಗರದ ಹೊರವಲಯದ ಅಕ್ಕಲಕೋಟೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. 

ಈ ಅಗ್ನಿ ದುರಂತದಲ್ಲಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಸೆಂಟ್ರಲ್ ಇಂಡಸ್ಟ್ರೀಸ್ ಕಾರ್ಖಾನೆ ಮಾಲೀಕ ಉಸ್ಮಾನ್  ಮನ್ಸೂರಿ(87), ಅನಸ್ ಮನ್ಸೂರಿ(24), ಸಿಫಾ ಮನ್ಸೂರಿ(24), ಯೂಸುಫ್ ಮನ್ಸೂರಿ(1.5), ಆಯೇಶಾ ಮನ್ಸೂರಿ(45), ಕಂಪನಿ ಕಾರ್ಮಿಕರಾದ ಮೆಹತಾಬ್ ಭಾಗವಾನ್(51), ಹೀನಾ ಭಾಗವಾನ್(35), ಸಲ್ಮಾನ್ ಭಾಗವಾನ್ (18) ಸಾವನ್ನಪ್ಪಿದವರು.

Related Articles

ಸುಮಾರು 10 ಮಂದಿ ಕಾರ್ಖಾನೆಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯರು ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯವು ನಡೆಯುತ್ತಿದೆ.

Home add -Advt

Related Articles

Back to top button